Headlines

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ ಪ್ರಕರಣ : ಕಾರು ತುಂಗಾ ಕಾಲುವೆಯಲ್ಲಿ ಬಿದ್ದಿರುವ ಶಂಕೆ|honnali

ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರ ಪುತ್ರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಚಂದ್ರಶೇಖರ್ ಕಾರು ತುಂಗಾ ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.




ಹೌದು, ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ಚಂದ್ರಶೇಖತ್ ಪತ್ತೆಗೆ ಪೊಲಿಸರು ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.


ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಬಳಿ ಚಂದ್ರಶೇಖರ್ ಕಾರು ಸಂಚರಿಸಿದೆ ಎಂಬ ಕುರುಹು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಚಂದ್ರಶೇಖರ್ ಕಾರು ತುಂಗಾ ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತುಂಗಾ ಕಾಲುವೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ರೇಣುಕಾಚಾರ್ಯ ಗೋಳಿಡುತ್ತಿದ್ದಾರೆ.


ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಸೋದರ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿ 5 ದಿನವಾದ್ರೂ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿಲ್ಲ. ಚಂದ್ರಶೇಖರ್ ನಾಪತ್ತೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ, ಅಣ್ಣನ ಮಗ ನಾಪತ್ತೆಯಾದ ಶಾಸಕ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ಚಂದ್ರಶೇಖರ್ ನ ಮೊಬೈಲ್ ಸ್ವಿಚ್ ಆಫ್ ಆಗಿ 5 ದಿನ ಕಳೆದಿದೆ. ಆದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ರೇಣುಕಾಚಾರ್ಯ ಅವರು, ಚಂದ್ರಶೇಖರ್ ನಾಪತ್ತೆಯಾಗಿಲ್ಲ. ಅವನನ್ನು ಅಪಹರಣ ಮಾಡಲಾಗಿದೆ. ಇದೊಂದು ಯೋಜಿತವಾಗಿ ನಡೆದ ಕಿಡ್ನಾಪ್ ಎಂಬುದು ಖಚಿತ. ಅಪಹರಣದ ಮಾಹಿತಿಗಳು ನನಗೆ ಬರುತ್ತಿವೆ. ಚಂದ್ರಶೇಖರ್ ನಾಪತ್ತೆಯಾಗಿ ಇಂದಿಗೆ 5 ದಿನಗಳು ಕಳೆದಿವೆ. ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿಯೇ ಚಂದ್ರಶೇಖರ್ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *

Exit mobile version