Headlines

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಇವತ್ತು ನೂರಕ್ಕು ಹೆಚ್ಚು ಡಿಜೆ ಸಿಸ್ಟಮ್‌ಗಳು ಅಳವಡಿಸಲಾಗಿತ್ತು , ಇನ್ನೊಂದೆಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆ ಡಿಜೆಗೆ ವಿರೋಧ ವ್ಯಕ್ತಪಡಿಸಿ ಭಿತ್ತಿ ಪತ್ರ ಪ್ರದರ್ಶಿಸಿದರು. ಇನ್ನೊಂದೆಡೆ ಭಾರಿ ಶಬ್ದ ಮಾಡುತ್ತಿದ್ದ ಡಿಜೆ ವಾಹನವನ್ನು ಪೊಲೀಸರು ತಡೆದು ಸೌಂಡ್ ಆಫ್ ಮಾಡಿಸಿದ ಘಟನೆ ನಡೆಯಿತು.

ಶಿವಮೊಗ್ಗ ನಗರದಲ್ಲಿ ಇವತ್ತು ಅದ್ಧೂರಿಯ ಈದ್ ಮಿಲಾದ್ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಈದ್ ಮೆರವಣಿಗೆಯಲ್ಲಿ ಡಿಜೆಗಳ ಅಬ್ಬರವೆ ಜೋರಿತ್ತು. ನೂರಕ್ಕಿಂತಲು ಹೆಚ್ಚು ವಾಹನಗಳಲ್ಲಿ ಸ್ಪೀಕರ್‌ಗಳು, ಡಿ.ಜೆ ಬಳಕೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಮಹಾರಾಷ್ಟ್ರದಿಂದ ತರಿಸಲಾಗಿದ್ದ ಡಿ.ಜೆ ವಾಹನ ತಡೆದ ಪೊಲೀಸರು ಮ್ಯೂಸಿಕ್ ಆಫ್ ಮಾಡಿಸಿದ ಘಟನೆಯು ನಡೆಯಿತು.

ನಿಗದಿಗಿಂತಲು ಹೆಚ್ಚು ಡೆಸಿಬಿಲ್‌ನ ಶಬ್ದ ಇದ್ದಿದ್ದರಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಆ ಡಿ.ಜೆ.ವಾಹನವನ್ನು ಡಿವೈಎಸ್‌ಪಿ ಕೃಷ್ಣಮೂರ್ತಿ ತಡೆದು ನಿಲ್ಲಿಸಿದರು. ಸ್ಥಳದಲ್ಲೇ ಇದ್ದ ಮುಸ್ಲಿಂ ಮುಖಂಡರ ಜೊತೆ ಚರ್ಚಿಸಿ ಮ್ಯೂಸಿಕ್ ಆಫ್ ಮಾಡಿಸಿದರು. ಆ ವಾಹನದ ಮ್ಯೂಸಿಕ್ ಸಿಸ್ಟಮ್‌ಗಳು ಬಂದ್ ಆಗಿಯೇ ಮೆರವಣಿಗೆಯಲ್ಲಿ ಸಾಗಿತು.

ಡಿಜೆ ವಿರುದ್ಧ ಭಿತ್ತಿ ಪತ್ರ ಪ್ರದರ್ಶನ

ಇನ್ನು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮುದಾಯದ ಯುವಕರಿಂದಲೇ ಡಿ.ಜೆ ಮತ್ತು ಡಾನ್ಸ್‌ಗೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಫ್ಲೇಕರ್ ಪ್ರದರ್ಶಿಸಿಕೊಂಡು ಮೆರವಣಿಗೆಯಲ್ಲಿ ಭಾಗಹಿಸಿದ್ದರು.

Exit mobile version