ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿಯ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಚಂದ್ರಶೇಖರ್ ಕಾರು ಪತ್ತೆಯಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಕೂಡ ಪತ್ತೆಯಾಗಿದೆ.
ಭದ್ರಾ ಮೇಲ್ದಂಡೆ ಕಾಲುವೆಗೆ ಕಾರು ಬಿದ್ದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಲುವೆಯಲ್ಲಿ ಶೋಧ ಮಾಡಿದಾಗ ಬಿಳಿ ಬಣ್ಣದ ಕ್ರೇಟಾ ಕಾರು ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ವೇಳೆ ಶಾಸಕ ರೇಣುಕಾಚಾರ್ಯ, ಪೊಲೀಸರು ಸೇರಿದಂತೆ ನೂರಾರು ಜನರು ಕಾಲುವೆ ಬಳಿ ಜಮಾಯಿಸಿದ್ದರು.
ಸಹೋದರನ ಪುತ್ರನ ಕೊಳೆತ ಮೃತದೇಹ ನೋಡಿ ಶಾಸಕ ರೇಣುಕಾಚಾರ್ಯ ಗೋಳಾಡಿದ ಘಟನೆ ನಡೆಯಿತು.