ಯಜಮಾನನ ಜೀವ ಉಳಿಸಿದ ಸಾಕು ನಾಯಿ – ಗ್ರಾಮಸ್ಥರಿಂದ ಶ್ವಾನದ ಮೆರವಣಿಗೆ|Sooduru
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಸೂಡೂರು ಗ್ರಾಮದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ತಾನೇ ಸಾಕಿದ ನಾಯಿ ಪತ್ತೆ ಹಚ್ಚಿದ ವಿನೂತನ ಘಟನೆ ನಡೆದಿದೆ. ಮಾಲೀಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ ನಾಯಿಯ ಸ್ವಾಮಿ ನಿಷ್ಠೆಗೆ ಇಡೀ ಸೂಡೂರು ಗ್ರಾಮವೇ ಹರ್ಷ ವ್ಯಕ್ತಪಡಿಸಿ ನಾಯಿಯ ಮೆರವಣಿಗೆ ಮಾಡಿದೆ. ನಿನ್ನೆ(ನ.12) ಬೆಳೆಗ್ಗೆ 6 ಗಂಟೆ ಸುಮಾರಿಗೆ ಮನೆಗೆ ಸೌದೆ ತರಲು ಎಂದು ಸೂಡೂರು ಗ್ರಾಮದ 50 ವರ್ಷ ವಯಸ್ಸಿನ ಶೇಖರಪ್ಪ ಮನೆಯ ಸಮೀಪದ ಕಾಡಿಗೆ ಹೋಗಿದ್ದಾರೆ….