Headlines

ವಲಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ 165 ಎಸೆತಕ್ಕೆ 407 ಬಾರಿಸಿದ ಸಾಗರದ ಯುವಕ|Cricket


ಶಿವಮೊಗ್ಗದ ಪೆಸಿಟ್ ಕ್ರೀಡಾಂಗಣದಲ್ಲಿ ನಡೆದಂತ 16 ವರ್ಷದ ಒಳಗಿನ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಗರದ ತನ್ಮಯ್ 165 ಬಾಲ್ ಗಳಿಗೆ 407 ರನ್ ಗಳನ್ನು ಪೇರಿಸುವ ಮೂಲಕ ಮಹತ್ವದ ಸಾಧನೆಗೈದಿದ್ದಾರೆ.

16 ವರ್ಷದ ಒಳಗಿನ ವಲಯಮಟ್ಟದ ಸೀಮಿತ 50 ಓವರ್ ಕ್ರಿಕೆಟ್ ಶಿವಮೊಗ್ಗದ ಪೆಸಿಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಈ ಪಂದ್ಯದಲ್ಲಿ ಸಾಗರದ ಮಂಜುನಾಥ ಪ್ಯಾಷನ್ಸ್ ಮಾಲಿಕರ ಪುತ್ರ ತನ್ಮಯ್ 165 ಬಾಲ್ ನಲ್ಲಿ 48 ಬೌಂಡರಿ, 24 ಸಿಕ್ಸರ್ ಗಳೊಂದಿಗೆ 4 ಶತಕಗಳ ಸಹಿತ 407 ರನ್ ಗಳಿಸಿ ದಾಖಲೆ ಮಾಡಿದ್ದಾರೆ.

ಹಿಂದಿನ ಕೆಲ ಪಂದ್ಯಗಳಲ್ಲೂ ತನ್ಮಯ್ ದಾಖಲೆಯ ಕ್ರಿಕೆಟ್ ಆಟ ಮುಂದಿನ ದಿನದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪ್ರತಿನಿದಿಸುವ ಎಲ್ಲಾ ಲಕ್ಷಣಗಳಿದೆ ಅಂತಹ ದಿನ ಬರಲಿ ತನ್ಮಯ್ ಭಾರತ ಕ್ರಿಕೆಟ್ ತಂಡದ ಇನ್ನೊಬ್ಬ ಸಚಿನ್ ತೆಂಡೂಲ್ಕರ್ ಆಗಲಿ ಎಂದು ತಾಲೂಕಿನ ಜನತೆ ಹಾರೈಸಿದ್ದಾರೆ.

ಅಂದಹಾಗೇ ಈ ದಾಖಲೆಯ 407 ರನ್ ಗಳಿಸಿದ ತನ್ಮಯ್ ಸಾಗರದ ಮಂಜು ಪ್ಯಾಶನ್ ಪಾಯಿಂಟ್ ಉದ್ಯಮಿ ಮಂಜುನಾಥ್ ಮತ್ತು ಪ್ರಗತಿ ದಂಪತಿಗಳ ಪುತ್ರನಾಗಿದ್ದಾನೆ.

ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ ಪಡೆದಂತ ಇವರು, ಇಂದು 165 ಬಾಲ್ ಗಳಿಗೆ 407 ರನ್ ಗಳಿಸಿರೋದುಕ್ಕೆ ಅಕಾಡೆಮಿಯ ತರಬೇತುದಾರ ನಾಗೇಂದ್ರ ಪಂಡಿತ್ ಸಂತಸ ವ್ಯಕ್ತ ಪಡಿಸಿದ್ದಾರೆ.

ಲಕ್ಕವಳ್ಳಿ ಮಠಕ್ಕೆ ಅನುದಾನ ಕೋರಿ ಸಿಎಂಗೆ ನ.15 ರಂದು ಮನವಿ : ವೃಷಭಸೇನ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿ

Leave a Reply

Your email address will not be published. Required fields are marked *

Exit mobile version