ಪದ್ಮ ಪ್ರಶಸ್ತಿಗಳು ಪ್ರಕಟ : ಜನರಲ್ ಬಿಪಿನ್ ರಾವತ್ ಗೆ ಮರಣೋತ್ತರ ಪದ್ಮ ವಿಭೂಷಣ : ಗುಲಾಂ ನಬಿ ಅಜಾದ್,ಸತ್ಯ ನಾದೆಲ್ಲಾ ಸೇರಿದಂತೆ ಅನೇಕರಿಗೆ ಒಲಿದ ಪದ್ಮ ಪ್ರಶಸ್ತಿ
ಕೇಂದ್ರ ಸರ್ಕಾರದಿಂದ ಗಣರಾಜ್ಯೋತ್ಸವ ದಿನಾಚರಣೆಯಂದು ಪ್ರತಿ ವರ್ಷ ನೀಡಲಾಗುವ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜನರಲ್ ಬಿಪಿನ್ ರಾವತ್ ಅವರಿಗೆ ಪದ್ಮವಿಭೂಷಣ ಸೇರಿದಂತೆ ಸುರಂಗ ಕೊರೆದು ಕೃಷಿ ಭೂಮಿಗೆ ನೀರು ಹರಿಸುವ ಸಾಧನೆ ತೋರಿದ್ದ ಬಂಟ್ವಾಳ ತಾಲೂಕಿನ ವಿಟ್ಲದ ಪ್ರಗತಿಪರ ಕೃಷಿಕ ಕೇಪು ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 2022ರ ಸಾಲಿನಲ್ಲಿ ನಾಲ್ವರು ಸಾಧಕರಿಗೆ ಪದ್ಮ ವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಹಾಗೂ 107 ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ…