ಬೈಕ್ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ : ಸಾಗರದ ಚಾರ್ಟಡ್ ಅಕೌಂಟೆಂಟ್ ಸೇರಿದ್ದಂತೆ ಇಬ್ಬರ ದುರ್ಮರಣ
ಸಾಗರ : ಸಾಗರದ ಆರ್. ಎಂ.ಸಿಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸಾಗರದ ಚಾರ್ಟೆಡ್ ಅಕೌಂಟೆಂಟ್ ರಾಜೇಶ್ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ರಾಜೇಶ್ ರವರು ಬಂದಗದ್ದೆಯ ನಿವಾಸಿಯಾಗಿದ್ದಾರೆ. ಹಾಗೂ ಎದುರುಗಡೆ ಬೈಕಿನ ಹರೀಶ್ (25 ) ವರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾರವಾರದಿಂದ ಕೂಲಿ ಕೆಲಸಕ್ಕೆ ಸಾಗರಕ್ಕೆ ಆಗಮಿಸಿದ್ದರು ಅಪಘಾತದಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.


