ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿಯ ಕೂಳೆ ಪಂಚಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರಾ ಮಹೋತ್ಸವವು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಶ್ರಾವಣ ಮಾಸದಲ್ಲಿ, ಬೇಸಿಗೆ ಕೂಳೆ ಪಂಚಮಿಯಲ್ಲಿ ವಿಶೇಷವಾಗಿ ಮಹೋತ್ಸವವು ನಡೆಯಲಿದೆ.
ಮದುವೆಗಾಗಿ, ಮಕ್ಕಳ ಫಲಕ್ಕೆ ಇಲ್ಲಿಗೆ ಆಗಮಿಸುವುದುಂಟು. ಮಂಗಳವಾರ ಮುಂಜಾನೆ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣಭಟ್ ನೇತೃತ್ವದಲ್ಲಿ ನಾಗೇಂದ್ರ ಸ್ವಾಮಿಗೆ ಅಭಿಷೇಕ, ಕ್ಷೀರಾಭಿಷೇಕ ಮತ್ತು ವಿಶೇಷ ಅಲಂಕಾರ ನಡೆಯಿತು. ದೇವರಿಗೆ ಮಹಾಮಂಗಳಾರತಿ ನೆರವೇರಿಸಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇಗುಲ ಸಮಿತಿಯ ಎಚ್.ಎಂ.ವರ್ತೇಶ್ಗೌಡರು, ಶಿವರಾಜ್, ಗಿರಿಯಪ್ಪಗೌಡ, ಕೇಶವಮೂರ್ತಿ, ಸುಬ್ರಹ್ಮಣ್ಯ ಆಚಾರ್, ರಾಘವೇಂದ್ರ, ಲಲಿತಮ್ಮ,ಸುರೇಶ್ ಗುಡ್ಡೆಕೊಪ್ಪ,ಲೋಕೇಶ್ ಶ್ರೀನಿವಾಸ್ ಗೌಡ,ಶಿವರಾಜ್ ಹಾಗೂ ಇನ್ನಿತರರಿದ್ದರು.