Headlines

ಲಗೇಜ್ ಆಟೋ ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರ ಸಾವು,ಓರ್ವ ಗಂಭೀರ|Accident

ಬೈಕ್ ಹಾಗೂ ಲಗೇಜ್ ಆಟೋ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೇಕಲೆ ರಸ್ತೆ ತಿರುವಿನಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ.




ಬೆಳಮಕ್ಕಿಯ ನಿವಾಸಿ ತಿಮ್ಮಣ್ಣ(40) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ.


ತುಮರಿಯಿಂದ ಮನೆಯತ್ತ ತೆರಳುತ್ತಿದ್ದ ತಿಮ್ಮಣ್ಣ ಅವರ ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಸಹ ಸವಾರ ಮಂಜಪ್ಪ ಎಂಬವರಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಟೇಶ್ವರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.




ತೇಕಲೆ ತಿರುವು ತುಮರಿ ಭಾಗದ ಅಪಘಾತ ವಲಯವೆಂದೇ ಪರಿಗಣಿಸಲ್ಪಡುತ್ತಿದ್ದು,ಕಳೆದ ತಿಂಗಳಿನಲ್ಲಿಯೇ ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು ಗ್ರಾಮಸ್ಥರು ದೂರಿದ್ದಾರೆ

ಕಾರ್ಗಲ್ ಪೊಲೀಸರು ತನಿಖೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





About The Author

Leave a Reply

Your email address will not be published. Required fields are marked *

Exit mobile version