Headlines

ಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಪೋಟ – ಟ್ರಾಫಿಕ್ ಜಾಮ್ ಗೆ ತತ್ತರಿಸಿದ ಪ್ರಯಾಣಿಕರು|Agumbe

ಆಗುಂಬೆಘಾಟಿಯಲ್ಲಿ ಲಾರಿ ಟೈರ್ ಸ್ಪೋಟಗೊಂಡ ಹಿನ್ನಲೆಯಲ್ಲಿ ಘಾಟಿಯಲ್ಲಿ ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು.

ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು.




ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ್ದಾರೆ. ಬಸ್ಸುಗಳು ಕೂಡ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.

ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿವೆ.




ಸೋಮೇಶ್ವರದ ಘಾಟಿಯ ಪ್ರವೇಶದಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿದಿದ್ದಾರೆ. ಒಮ್ಮೆಗೆ ಕೆಲವು ವಾಹನಗಳನ್ನು ಘಾಟಿಯ ಮೇಲೆ ಬಿಡಲಾಗುತ್ತಿದೆ.



About The Author

Leave a Reply

Your email address will not be published. Required fields are marked *

Exit mobile version