ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಇಂದು ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ.
ಕರುಣಾಕರ ಎಂಬ 33 ವರ್ಷದ ಎಂಬಿಎ ಪದವೀಧರ ಎರಡು ವರೆ ವರ್ಷದ ಹಿಂದೆ ಬುಳ್ಳಾಪುರದ ಯುವತಿ ಅಮಿತಾ(26) ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದರು ಮಕ್ಕಳಾಗಿರಲಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಪದೇ ಪದೇ ಜಗಳವಾಡುತ್ತಿದ್ದ ಪತಿಪತ್ನಿ ಕಳೆದ ವರ್ಷ ಗಂಡನ ಮನೆ ತೊರೆದು ಪತ್ನಿ ಅಮಿತಾ ತವರು ಮನೆ ಸೇರಿದ್ದಳು. ಮೂರು ತಿಂಗಳ ಹಿಂದಷ್ಟೆ ಗಂಡನ ಮನೆಗೆ ಬಂದಿದ್ದಳು. ಶ್ರಾವಣಕ್ಕೆ ಬಂದಿದ್ದ ಆಕೆ ಬಾದ್ರಪದ ಕಳೆಯುವಷ್ಟರಲ್ಲಿ ಹೆಣವಾಗಿದ್ದಾಳೆ.
ಆರೋಗ್ಯ ಸರಿಯಲ್ಲದ ತನ್ನ ತಾಯಿಯನ್ನು ಆಸ್ಪತ್ರೆಗೆ ಹೋಗು ಎಂದು ದುಮ್ಮಳ್ಳಿ ಚಾನೆಲ್ ವರೆಗೆ ಬಿಟ್ಟು ಬಂದಿದ್ದ ಕರಣಾಕರ ಪತ್ನಿಯ ಕುತ್ತಿಗೆಯ ಕೆಳಭಾಗವನ್ನ ಬಗೆದುಬಿಟ್ಟಿದ್ದಾನೆ. ಪತಿಪತ್ನಿಯರ ಜಗಳ ಕೊಲೆ ಹಂತಕ್ಕೆ ಬಂದು ತಲುಪಿರುವುದು ಏಕೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದುಮ್ಮಳ್ಳಿ ಗ್ರಾಮದ ವಾಸಿಯಾದ ಕರುಣಾಕರ (36) ಈತನಿಗೆ 02 ವರ್ಷದ ಹಿಂದೆ ಅಮಿತಾ (27) ಇವರನ್ನು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಸಮಯದಲ್ಲಿ ಬಂಗಾರ ಮತ್ತು ಹಣವನ್ನು ಕೊಟ್ಟಿದ್ದರೂ ಕೂಡ, ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರವನ್ನು ತರುವಂತೆ ಹೆಂಡತಿಗೆ ಪೀಡಿಸುತ್ತಿದ್ದು, ಕೊಡಲು ಸಾಧ್ಯವಾಗದೇ ಇದ್ದುದರ ದ್ವೇಶದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆರೋಪಿ ಕರುಣಾಕರನು ದುಮ್ಮಳ್ಳಿಯ ವಾಸದ ಮನೆಯಲ್ಲಿ ಆತನ ಹೆಂಡತಿಯಾದ ಅಮಿತಾಳ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಕಲಂ 498A,304B,302 ಐಪಿಸಿ ಮತ್ತು ಕಲಂ 3 ಮತ್ತು 4 DOWRY PROHIBITION ACT, 1961 ರೀತ್ಯಾ ಪ್ರಕರಣ ದಾಖಲಿಸಿ ಆರೋಪಿ ಕರುಣಾಕರನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್