ಶಿವಮೊಗ್ಗ : ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 65 ವರ್ಷದ ವೃದ್ಧರೊಬ್ಬರಿಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ನಾಗಪ್ಪನಿಗೆ ರೂ. 60,000 ದಂಡವನ್ನು ಹಾಕಲಾಗಿದೆ.
ಆರೋಪಿ ನಾಗಪ್ಪ 2020 ಸೆಪ್ಟೆಂಬರ್ 13 ರಂದು ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ.
ಅಪ್ರಾಪ್ತ ಬಾಲಕಿ ಕೃಷಿ ಜಮೀನಿಗೆ ಹೋದಾಗ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಮಹಿಳಾ ಪೊಲೀಸರು ನಾಗಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೊಮಾನಲ್ ವಿಚಾರಣೆ ನಡೆಸಿ, ನಾಗಪ್ಪ ವಿರುದ್ಧ ಜಾರ್ಜ್ ಶೀಟ್ ದಾಖಲಿಸಿದ್ದರು.
ಪ್ರಾಸಿಕ್ಯೂಸನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿ ಪ್ರಸಾದ್ ವಾದಿಸಿದರು. ಪೊಕ್ಸೋ ಕಾಯ್ದೆ 2012ರ ಸೆಕ್ಷನ್ 6ರ ಅಡಿಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಜೆ ಎಸ್ ಮೋಹನ್ ನಾಗಪ್ಪ ಅವರನ್ನು ದೋಷಿ ಎಂದು ಪರಿಗಣಿಸಿ, ಶನಿವಾರ ತೀರ್ಪು ಪ್ರಕಟಿಸಿದರು.
ಆರೋಪಿ ಒಂದು ವೇಳೆ ದಂಡ ಪಾವತಿಸುವಲ್ಲಿ ವಿಫಲನಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಕಾಲ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ Former Karnataka Education Minister and Tiptur…
ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ Sagara Rural Police arrested…
ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು A young man identified as Abu Sufiyan Khan…
ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ Thirthahalli sisters Ganavi and Pavani secured first place in…
ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ ,…
RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…