ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಚಾಕು ಇರಿತ : ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ಕೊಟ್ಟ ಎಸ್ ಪಿ ಲಕ್ಷ್ಮಿಪ್ರಸಾದ್

ಶಿವಮೊಗ್ಗ : ನಿನ್ನೆ ಸಂಜೆ ಏಳು ಮೂವತ್ತರ ಸುಮಾರಿಗೆ ಶಿವಮೊಗ್ಗದ ಗಾಂಧಿಬಜಾರ್​ನಲ್ಲಿರುವ ಚೋರ್​ಬಜಾರ್​ ಬಟ್ಟೆಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕ ಸೆಂಥಿಲ್​ಗೆ ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.


43 ವರ್ಷದ ಸೆಂಥಿಲ್​ ಎಂಬಾತನಿಗೆ ಚಾಕುವಿನಿಂದ ನಾಲ್ಕೈದು ಕಡೆ ಇರಿಯಲಾಗಿದೆ. ಅವರನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. 307 ಸೆಕ್ಷನ್​ ಅಡಿಯಲ್ಲಿ ಕೇಸ್​ ಆಗಿದ್ದು, ಜೋಗಿ ಸಂತು, ರಮೇಶ್, ಲೋಕೇಶ್ ಹಾಗೂ ಇನ್ನೊಬ್ಬನ ವಿರುದ್ಧ ಕೇಸ್​ ಆಗಿದೆ. ಲೋಕೇಶ್​ ಎಂಬಾತನ ಪಕ್ಕದಲ್ಲಿಯೇ ಬಟ್ಟೆ ಅಂಗಡಿಯಿಟ್ಟುಕೊಂಡಿರುವ ಸೆಂಥಿಲ್ ಹಾಗೂ ಲೋಕೇಶ್​ ನಡುವೆ ಅಂಗಡಿಯಲ್ಲಿ ಬಟ್ಟೆಗಳನ್ನ ಇಡುವ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ​ ಹಾಗೂ ಜೋಗಿ ಸಂತು ಈ ಹಿಂದೆ ಸೆಂಥಿಲ್​ ಜೊತೆಗೆ ಇದ್ದವರು. ಅವರಿಬ್ಬರ ನಡುವೆ ಹಣಕಾಸು ಹಾಗೂ ಅಂಗಡಿಯ ವಿಷಯಕ್ಕೆ ವೈಷಮ್ಯ ಉಂಟಾಗಿತ್ತು. ಅಲ್ಲದೆ ಕಳೆದ ವರ್ಷ ಸೆಂಥಿಲ್​ ಜೋಗಿ ಸಂತು ಮೇಲೆ ಹಲ್ಲೆ ಮಾಡಿದ ಪ್ರಕರಣವೊಂದು ಇತ್ತು. ಈ ಹಿನ್ನೆಲೆ ಅದರ ಪ್ರತೀಕಾರಕ್ಕಾಗಿಯೇ ಈ ಕೃತ್ಯವೆಸಗಲಾಗಿದೆ ಎಂಬ ಶಂಕೆ ಇದೆ ಎಂದು ಎಸ್​ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಅಲ್ಲದೆ, ಘಟನೆ ಸಂಬಂಧ ನಾಲ್ವರ ಬಂಧನ ಇನ್ನಷ್ಟೆ ಆಗಬೇಕಿದೆ ಎಂದಿದ್ದಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ Former Karnataka Education Minister and Tiptur…

12 hours ago

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ Sagara Rural Police arrested…

14 hours ago

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು A young man identified as Abu Sufiyan Khan…

14 hours ago

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ Thirthahalli sisters Ganavi and Pavani secured first place in…

14 hours ago

ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು ಆರೋಪ , ಸ್ಥಳಕ್ಕೆ ಅಧಿಕಾರಿಗಳ ದೌಡು

ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ ,…

1 day ago

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…

2 days ago