Headlines

ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣ : 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ ಪೊಲೀಸರು

ತೀರ್ಥಹಳ್ಳಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಳೂರು ಪೊಲೀಸರು 48 ಗಂಟೆಯಲ್ಲಿ ಪ್ರಕರಣದ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನಲೆ :

ತಮಿಳುನಾಡಿನ ಮೂಲದ ಯುವಕ, ಚೆನ್ನಗಿರಿ ಹೊನ್ನಾಳಿ ಭಾಗದ ನೆಂಟರ ಸಂಪರ್ಕ ಪಡೆದು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ತೀರ್ಥಹಳ್ಳಿಯ ಕುಡುಮಲ್ಲಿಗೆಯಲ್ಲಿ ಗಾರೆ ಕೆಲಸ ಮಾಡುವವರೊಬ್ಬರ ಪರಿಚಯವಾಗಿ ಅವರ ಜೊತೆಗೆ 15 ದಿನದಿಂದ ಕೆಲಸ ಮಾಡುತ್ತಿದ್ದ.

ಆತ ತನಗೆ ಕೆಲಸ ಕೊಟ್ಟಿದ್ದವರ ಅಪ್ತಾಪ್ತ ವಯಸ್ಸಿನ ಮಗಳನ್ನ ಪುಸಲಾಯಿಸಿ, ತಮಿಳುನಾಡಿಗೆ ಕರೆದೊಯ್ದಿದ್ದ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್​ ಕೇಸ್​ ದಾಖಲಾಗಿತ್ತು. ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಕೇವಲ 48 ಗಂಟೆಯ ಒಳಗಾಗಿ ಆರೋಪಿಯನ್ನ ಹಿಡಿದು, ಅಪ್ತಾಪ್ತೆಯನ್ನ ಸುರಕ್ಷಿತವಾಗಿ ವಾಪಸ್​ ಕರೆತಂದಿದ್ದಾರೆ.

ಮಾಳೂರು ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಸೇರಿದಂತೆ ಸಿಬ್ಬಂದಿ ತಮಿಳುನಾಡಿನ ವೆಲ್ಲೂರಿಗೆ ಹೋಗಿ, ಅಲ್ಲಿ ಆರೋಪಿ ಇದ್ದ ವಿಳಾಸ ತಿಳಿದು ಕಾರ್ಯಾಚರಣೆ ನಡೆಸಿ ಆತನನ್ನ ಹಾಗೂ ಅಪ್ತಾಪ್ತೆಯನ್ನ ವಾಪಸ್ ಕರೆತಂದಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.




ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *

Exit mobile version