ತೀರ್ಥಹಳ್ಳಿ : ಆರಗ ಸಮೀಪದ ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಳಗೇರಿ ಬಸ್ ನಿಲ್ದಾಣದ ಸಮೀಪ ರಸ್ತೆ ಮಧ್ಯದಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ.
ಮೂಡುವಳ್ಳಿಯ ಚೇತನ್ ( 27 ವರ್ಷ ) ಮೃತಪಟ್ಟ ವ್ಯಕ್ತಿಯಾಗಿದ್ದು,ರಸ್ತೆ ಮಧ್ಯದಲ್ಲಿಯೇ ಬೆಳಗಿನ ಜಾವ ಶವ ಪತ್ತೆಯಾಗಿದೆ.
ಯುವಕನಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗುತಿದ್ದರೂ, ಬಸ್ ನಿಲ್ದಾಣ ಸಮೀಪ KA-15-L-0286 ಹೀರೋ ಹೊಂಡ ಸ್ಪೆಂಡರ್ ಬೈಕ್ ನಿಂತಿದ್ದು ಪಾದರಕ್ಷೆ ಸಹ ಅಲ್ಲೇ ಇದೆ ಎನ್ನಲಾಗಿದೆ.
ಬೈಕ್ ನಿಲ್ಲಿಸಿರುವ ಸ್ಥಿತಿಯಲ್ಲೇ ಇರುವುದರಿಂದ ಸ್ಥಳೀಯ ಸಾರ್ವಜನಿಕರು ಚೇತನ್ ಸಾವಿನ ಬಗ್ಗೆ ಅನುಮಾನದ ಶಂಕೆ ವ್ಯಕ್ತಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.