Headlines

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ವೇಳೆ ಕಾರ್ಮಿಕ ಸಾವು :

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೇಳೆ ನಡೆದ ಅವಘಡ ದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ.


ಮಣ್ಣನ್ನು ಸಮತ್ತಟ್ಟು ಮಾಡುವ ವೇಳೆ ಮಣ್ಣು ಕಂಪ್ರೆಸ್ ಮಾಡುವ ಬುಲ್ಡೋಜರ್ ನಂತಹ ಮಿಷಿನ್ ಆತನ ಮೇಲೆ ಹರಿದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.


ಕಾರ್ಮಿಕ ಮಲ್ಲಿಕಾರ್ಜುನ ನಿರ್ಲಕ್ಷ ತನದಿಂದ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದ್ದು. ಮಲ್ಲಿಕಾರ್ಜುನ ಮೂಲತಃ ಹಾವೇರಿ ಜಿಲ್ಲೆಯವನಾಗಿದ್ದು ತನ್ನ ತಂದೆಯ ಜೊತೆ ಶಿವಮೊಗ್ಗದ ವಿಮಾನ ನಿಲ್ದಾಣದ ಕೆಲಸಕ್ಕೆ ಬಂದಿದ್ದನು.

ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version