ಬೆಳದಿಂಗಳ ಬಾಲೆಯ ಬೆನ್ನತ್ತಿ ಹೋಗಿ ಹಣ ಕಳೆದುಕೊಂಡ ಯುವಕ : ಸಾಮಾಜಿಕ ಜಾಲತಾಣದ ಮನ್ಮಥರು ನೋಡಲೇಬೇಕಾದ ಸ್ಟೋರಿ!!!!!


ಇನ್ ಸ್ಟಾ‌ಗ್ರಾಮ್ ನಲ್ಲಿ ಪರಿಚಯವಾದ ಬೆಳದಿಂಗಳ ಬಾಲೆಯೊಬ್ಬಳು ತನ್ನ‌ ಬೇಡಿಕೆ ಈಡೇರಿಕೆಗಾಗಿ ಸಹಚರರ ಮೂಲಕ ಸೊರಬ ತಾಲೂಕು ಕ್ಯಾಸನೂರು ಗ್ರಾಮ ಉಮಟೆಗದ್ದೆ ನಿವಾಸಿ ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡಿ, ಹಣ ಕಿತ್ತುಕೊಂಡು ವಂಚಿಸಿರುವ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ.

ಸಾಗರದ ಸಂಜಯ್ ಮೆಮೋರಿಯಲ್ ಡಿಪ್ಲಮೋ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಯ ವಿವೇಕ್ ಎಂಬ ಯುವಕನಿಗೆ ಇನ್ಸ್ಟಾ ಗ್ರಾಮ್ ನಲ್ಲಿ ಅಣಲೇಕೊಪ್ಪದ ಸೌಜನ್ಯ ಎಂಬ ಯುವತಿ ಹಾಯ್ ಎಂಬ ಮೆಸೇಜ್ ಕಳುಹಿಸುವ ಮೂಲಕ ಪರಿಚಿತಳಾಗುತ್ತಾಳೆ.

ಇಬ್ಬರು ಪರಸ್ಪರ ಮೊಬೈಲ್ ನಲ್ಲಿ ಮಾತಾಡಿಕೊಂಡಿದ್ದ ಸೌಜನ್ಯ ದಿಡೀರನೇ ಒಂದು ಹೊಸ ಮೊಬೈಲ್ ಕೊಡಿಸಲು ಬೇಡಿಕೆ ಇಡುತ್ತಾಳೆ. ಮರುದಿನವೇ ನಾಳೆ ಹುಟ್ಟುಹಬ್ಬವಿದೆ ಸಾಗರಕ್ಕೆ ಬಾ ಎಂದು ವಿವೇಕ್ ನನ್ನ ಕರೆದಿದ್ದಾಳೆ.

ಬೆಳದಿಂಗಳ ಬಾಲೆಯ ಭೇಟಿಗೆ ಬಂದಾಗ ಕಾದಿತ್ತು ಶಾಕ್:

ಪ್ರೇಯಸಿಯನ್ನು  ಸಾಗರಕ್ಕೆ ಬಂದ ವಿವೇಕ್ ಅಣಲೇಕೊಪ್ಪದ ಪಾರ್ಕ್ ಬಳಿ ಬರುತ್ತಿದ್ದಂತೆ ಬೋಂಡ ರವಿ ಎಂಬ ವ್ಯಕ್ತಿ ನಾನು ಸೌಜನ್ಯಳ ಸ್ನೇಹಿತ ಆಕೆ ತಡವಾಗಿ ಬರುತ್ತಾಳೆ ಅಲ್ಲಿಯವರೆಗೆ ಪಾರ್ಕ್ ನಲ್ಲಿ ಕೂರೋಣ‌ ಎಂದು ಕರೆದುಕೊಂಡು ಹೋಗಿದ್ದಾನೆ.

ಬೊಂಡಾ ರವಿ ಎಂಬುವವನ ಫೋನ್ ಗೆ ಬೆಳದಿಂಗಳ ಬಾಲೆ ಸೌಜನ್ಯ ಕರೆ ಮಾಡಿದಾಗ ಲೌಡ್ ಸ್ಪೀಕರ್ ಆನ್ ಮಾಡಿದ್ದಾನೆ. ವಿವೇಕ ಮೆಸೇಜ್ ಮಾಡಿರುವುದು ನಮ್ಮ ಮನೆಯಲ್ಲಿ ನಮ್ಮ ತಂದೆಗೆ ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಸೌಜನ್ಯ ತಿಳಿಸಿ ಕಾಲ್ ಕಟ್ ಮಾಡಿದ್ದಾಳೆ. ಸ್ವಲ್ಪ ಸಮಯದ ನಂತರ ಬೊಂಡಾ ರವಿಗೆ ಸೌಜನ್ಯ ತಂದೆ ತರಹ ಯಾರೋ ದ್ವನಿಯಲ್ಲಿ ಮಾತನಾಡಿ ನನ್ನ ಮಗಳಿಗೆ ಯಾರೋ ಮೆಸೇಜ್ ಮಾಡಿದ್ದಾರೆ. ಅವನ್ನು ಪತ್ತೆ ಮಾಡು ಎಂದು ತಿಳಿಸಿದ್ದಾನೆ.


ಇದಾದ 5 ನಿಮಿಷದಲ್ಲಿ ಇಸ್ಮಾಯಿಲ್ ಎಂಬ ವ್ಯಕ್ತಿ ಬಂದು ವಿವೇಕನಿಗೆ ಎರಡು ಹೊಡೆತವನ್ನು ಹೊಡೆದು ನಿನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆಂದು ಬೆದರಿಕೆ ಹಾಕಿದ್ದಾನೆ ನಂತರ ಇಸ್ಮಾಯಿಲ್ ವಿಶ್ವನಾಥ ಎಂಬ ಪೊಲೀಸ್ ನವರಿಗೆ ಪೋನ್ ಮಾಡಿ ವಿವೇಕ್ ಎಂಬ ಹುಡುಗ ಒಂದು ಹುಡುಗಿಗೆ ಪೋನ್ ಮಾಡಿ ಕಿರುಕುಳ ನೀಡುತಿದ್ದಾನೆ ಆತನ ವಿರುದ್ಧ ಕೇಸು ಮಾಡಿ ಎಂದು ಹೇಳಿದ್ದಾನೆ.

ರಾಜಿ ಪಂಚಾಯಿತಿಯ ನಾಟಕ ನಡೆಸಿದ ವಂಚಕರು:

ನಂತರ ಇಸ್ಮಾಯಿಲ್ ಕೇಸು ಮುಚ್ಚಿ ಹಾಕಲು 20 ಸಾವಿರ ಹಣ ಕೊಡು ವಿಶ್ವನಾಥ ಪೊಲೀಸ್ ನವರಿಗೆ ಕೊಡಬೇಕು ಎಂದು ಹೇಳಿ ತಕ್ಷಣ ವಿವೇಕನ ಜೇಬಿನಲಿದ್ದ 3000 ಸಾವಿರ ರೂ ಹಣ ತೆಗೆದುಕೊಂಡು ಉಳಿದ ಹಣ‌ವನ್ನ ಇನ್ನು ನಾಲ್ಕೈದು ದಿನ ಬಿಟ್ಟುಕೊಡು ಎಂದು ಹೇಳಿ ಬಿಟ್ಟು ಕಳಿಸಿದ್ದಾನೆ.

ನಂತರ ಹಣಕ್ಕೆ ಇವರಿಬ್ಬ ಖದೀಮರು ಪದೇ ಪದೇ ವಿವೇಕ್ ಗೆ ಕಾಲ್ ಮಾಡಿದ್ದಾರೆ. ಇಬ್ಬರ ಕಾಟಕ್ಕೆ ವಿವೇಕ್ ಇಬ್ಬರ ಮೊಬೈಲ್ ನಂಬರನ್ನ ಬ್ಲಾಕ್ ಲೀಸ್ಟ್ ಗೆ ಹಾಕಿದ್ದಾನೆ.

ಮಾಸೂರಿಗೂ ಹುಡುಕಿಕೊಂಡು ಹೋದ ವಂಚಕರು:

ವಿವೇಕ್ ಪೋನ್ ರಿಸೀವ್ ಮಾಡದ ಹಿನಲೆಯಲ್ಲಿ ಇಸ್ಮಾಯಿಲ್ ಮತ್ತು ಬೋಂಡಾ ರವಿ ಮಾಸೂರಿಗೆ ಹುಡುಕಿಕೊಂಡು ಹೋಗಿ ವಿವೇಕ್ ನ ಭಾವ ಚಿತ್ರ ತೋರಿಸಿ ವಿಚಾರಿಸಿದ್ದಾರೆ. ಇದನ್ನ ಕಂಡ‌ ವಿವೇಕ್ ನ ಸ್ನೇಹಿತ ನಿನನ್ನ ಯಾರೋ ಇಬ್ಬರು ಹುಡುಕುತ್ತಿರುವಾಗಿ ವಿಷಯ ಮುಟ್ಟಿಸುತ್ತಾನೆ.

ಕೂಡಲೇ ವಿವೇಕ್ ಮಧ್ಯವರ್ತಿಗಳ ಮೂಲಕ ಮಾಸೂರಿನ ಅಣ್ಣಪ್ಪ ಎಂಬುವವರ ಅಂಗಡಿಯಲ್ಲಿ 5 ಸಾವಿರ ರೂ. ಹಣವನ್ನು ಈ ಬೋಂಡ ರವಿಗೆ ಮತ್ತು‌ ಇಸ್ಮಾಯಿಲ್ ಗೆ ಕೊಡಿಸುತ್ತಾನೆ.

ಠಾಣೆಗೆ ದೂರು ನೀಡಿದ ಸಂತ್ರಸ್ಥ ಯುವಕನ ತಂದೆ:

ಅಂಗಡಿಯ ಮಾಲೀಕ ಅಣ್ಣಪ್ಪ ವಿವೇಕ್ ನ ತಂದೆ ಕುಬೇರಪ್ಪನಿಗೆ‌ ಈ ವಿಷಯವನ್ನು ಮುಟ್ಟಿಸುತ್ತಾರೆ. ವಿಷಯ ತಿಳಿದಾಕ್ಷಣ ಮೊಬೈಲ್ ಮೂಲಕ ಪರಿಚಯಿಸಿಕೊಂಡು ಮೊಬೈಲ್ ಕೊಡಿಸುವಂತೆ ಪಿಡೀಸಿ ವ್ಯವಸ್ಥಿತ ಜಾಲದಲ್ಲಿ ಬೆದರಿಸಿ ಹಣ ಪಡೆದು ಮೊಬೈಲ್ ಕಿತ್ತುಕೊಂಡ ಸೌಜನ್ಯ, ಬೊಂಡಾರವಿ, ಇಸ್ಮಾಯಿಲ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕುಬೇರಪ್ಪ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಒಟ್ಟಾರೆಯಾಗಿ ಬೆಳದಿಂಗಳ ಬಾಲೆಯ ಬೆನ್ನತ್ತಿ ಹೋದ ಯುವಕ ಮೊಬೈಲ್ ,ಹಣ ಎಲ್ಲಾ ಕಳೆದುಕೊಂಡಿದ್ದಾನೆ.ನಿಜವಾಗಿಯೂ ಸೌಜನ್ಯ ಎನ್ನುವ ಹುಡುಗಿ ಇದ್ದಾಳೋ ಅಥವಾ ಅದು ಕೂಡಾ ಈ ವಂಚಕರ ಜಾಲವೋ‌ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ

ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ “ಕೊಟ್ಟ ಮಾತಿನಂತೆ ವಿದ್ಯುತ್ ದೀಪ ಅಳವಡಿಸಿದ್ದೇನೆ” —…

3 hours ago

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ

ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…

5 hours ago

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…

1 day ago

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…

1 day ago

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…

1 day ago

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

2 days ago