ಆನಂದಪುರದ ರಬ್ಬರ್ ಮರಗಳನ್ನ ಟ್ಯಾಪಿಂಗ್ ಬಂದಿದ್ದ ಜಿಸ್ ಎಂಬ ಮಧ್ಯ ವಯಸ್ಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಲಾಗಿದ್ದು ತಲೆಗೆ 6 ಹೊಲಿಗೆ ಹಾಕಲಾಗಿದೆ
ರಬ್ವರ್ ಮರಗಳ ಟ್ಯಾಪಿಂಗ್ ಮಾಡಿ ರಬ್ಬರ್ ಇಳಿಸಲು ಕೇರಳ ರಾಜ್ಯದಿಂದ ಬಂದಿದ್ದ ಜಿಸ್ ಮೊನ್ನೆ ರಾತ್ರಿ ಆನಂದಪುರದ ವೈನ್ ಶಾಪ್ ಬಳಿ ತೆರಳಿದ್ದಾರೆ. ಜಿಸ್ ನನ್ನ ಇಲ್ಲಿ ಪ್ಲಾಂಟೇಷನ್ ಗುತ್ತಿಗೆ ಹಿಡಿದು ಕೆಲಸ ಮಾಡುವ ಅಲೆಕ್ಸ್ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದರು.
ವೈನ್ ಶಾಪ್ ನಲ್ಲಿ ಕನ್ನಡ ಬಾರದ ಜಿಸ್ ಗೆ ಅಪರಿಚಿತನೋರ್ವನ ಜೊತೆ ಕಿರಿಕ್ ಆಗಿದೆ. ಕನ್ನಡ ಅರ್ಥವಾಗದ ಜಿಸ್ ಗೂ ಅಪರಿಚಿತನ ನಡುವೆ ಕೈ ಕೈ ಮಿಲಾಯಿಸಿದ್ದಾರೆ. ಮದ್ಯದ ನಶೆಯಲ್ಲಿ ಅಪರಿಚಿತ ಜಿಸ್ ಗೆ ಬಿಯರ್ ಬಾಟಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.
ಜಿಸ್ ಗೆ ತೀವ್ರವಾಗಿ ರಕ್ತಸ್ರಾವ ವಾಗಿದೆ. ಈ ವೇಳೆ ಕೇರಳದಲ್ಲಿರುವ ತನ್ನ ಪತ್ನಿಗೆ ಕರೆ ಮಾಡಿದ ಜಿಸ್ ಹಲ್ಲೆ ನಡೆದಿರುವ ಬಗ್ಗೆ ವಿವರಿಸಿದ್ದಾನೆ. ತಾನು ಬದುಕುವುದಿಲ್ಲವೆಂದು ತಿಳಿಸಿದ್ದಾನೆ.
ಆತನ ಪತ್ನಿ ರಬ್ಬರ್ ಪ್ಲಾಂಟೇಶನಿನ ಗುತ್ತಿಗೆ ಹಿಡಿದ ಅಲೆಕ್ಸ್ ಗೆ ಕರೆ ಮಾಡಿ ಜಿಸ್ ಗೆ ಹಲ್ಲೆಯಾಗಿರುವುದನ್ನ ವಿವರಿಸಿದ್ದಾರೆ. ಅಲೆಕ್ಸ್ ಕೂಡಲೇ ಆನಂದ ಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತದ ನಂತರ ಮೆಗ್ಗಾನ್ ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಬಿಯರ್ ಬಾಟಲಿಯ ಹೊಡೆತದ ಬಿರುಸಿಗೆ 6 ಹೊಲಿಗೆ ಹಾಕಿದ್ದಾರೆ. ಜಿಸ್ ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಾಗಿದೆ.
ಮಾಹಿತಿ : ಸುದ್ದಿಲೈವ್
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್