ತೀರ್ಥಹಳ್ಳಿ : ಗುಂಡೇಟಿಗೆ ಬಲಿಯಾದ ನೊಣಬೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕಾಂತರಾಜು ಅವರು ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಪ್ರಕರಣ ದಾಖಲಾಗಿದೆ. ಎಫ್ಐಆರ್ ನಲ್ಲಿ ಕಾಂತರಾಜು ರವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಮಾತ್ರ ದಾಖಲಾಗಿದೆ.
ಕಾಂತರಾಜ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ದೊಡ್ಡಪ್ಪನ ಮಗ ಗಣೇಶ್ ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.
ನಿನ್ನೆ ಮಧ್ಯಾಹ್ನ ಶಿರಿಗಾರು ನಿವಾಸಿ ಕಾಂತರಾಜು ಮನೆಯಿಂದ ಯಾವುದೋ ಕೆಲಸದ ಮೇಲೆ ಹೊರ ಹೋಗುವಾಗ ಹೊಸಕೇರಿ, ಅತ್ತಿಗಾರಿಗೆ ಹೋಗುವ ರಸ್ತೆಯಲ್ಲಿ ಗುಂಡೇಟು ತಗುಲಿದೆ ಎಂದು ಕಾಂತರಾಜು ದೊಡ್ಡಪ್ಪನ ಮಗ ಗಣೇಶ್ ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.
ಚಂದ್ರಶೇಖರ್ ಚಂದವಳ್ಳಿಯವರು ಕರೆ ಮಾಡಿದ ಹಿನ್ನಲೆಯಲ್ಲಿ ಗಣೇಶ್ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದೌಡಾಯಿಸಿದ್ದು ಆಸ್ಪತ್ರೆಗೆ ಹೋದಾಗ ಕಾಂತರಾಜು ಸಾವನ್ನಪ್ಪಿದ್ದರು.
ಗುಂಡೇಟು ತಗುಲಿದಾಗ ಮಂಜುನಾಥ ರವರನ್ನು ಅರಳಸುರಳಿಯವರು ಯಾವುದೋ ವಾಹನದಲ್ಲಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಕಾಂತರಾಜು ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ಗುಂಡೇಟು ತಗುಲಿರುವ ಬಗ್ಗೆ ಗುಂಡು ಹಾರಿಸಿರುವ ಬಗ್ಗೆ ಅನುಮಾನವಿದೆ ಎಂದು ಮಾತ್ರ ಎಫ್ಐಆರ್ ದಾಖಲಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಗಣೇಶ್ ಒತ್ತಾಯಿಸಿದ್ದಾರೆ.