ಸಾಗರ :ಈ ಸಲ ಕಪ್ ನಮ್ದೆ’ ಈಗಾಗಲೇ ಈ ವಾಕ್ಯ ನಿಮ್ಮ ಮನದಲ್ಲೂ ಗುಣುಗುಡುತ್ತಿರಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್, ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿರೀಟ ಗೆಲ್ಲಲು ಪಣತೊಟ್ಟಿದೆ.ಅಭಿಮಾನಿಗಳಂತೂ ಈ ಬಾರಿ ಕಪ್ ಗೆದ್ದೇ ಗೆಲ್ತೀವಿ ಎಂಬ ಅಚಲ ಆತ್ಮವಿಶ್ವಾಸದಲ್ಲಿದ್ದಾರೆ.
ಇದರಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಸಲ ಕಪ್ ನಮ್ದೆ’ ಎಂಬ ಹ್ಯಾಶ್‌ಟ್ಯಾಗ್ ಗಳು ಕೂಡ ವೈರಲ್ ಆಗಿ ಹರಡುತ್ತಿದೆ. ಈ ಡೈಲಾಗ್ ಮೂಲಕ ಆರ್ಸಿಬಿ ಫ್ಯಾನ್ಸ್‌ಗಳು ಒಂದಲ್ಲ ಒಂದು ರೀತಿ ಹವಾ ಎಬ್ಬಿಸುತ್ತಲೇ ಇರುತ್ತಾರೆ.
ಅಂತೆಯೇ…. ಸಾಗದಲ್ಲೂ ಕೂಡ ಐಪಿಎಲ್ ಜ್ವರ ಹೆಚ್ಚಾಗಿದೆ. ಇದಕ್ಕೆ ತಾಜಾ ಉದಾಹರಣೆಯಾಗಿದ್ದು,ಸಾಗರದ “ಸದ್ಗುರು ಹೋಟೆಲ್ ಮಾಲೀಕ ಸಂತೋಷ್ ಸದ್ಗುರು” ರವರು. ಸಂತೋಷ್ ಸದ್ಗುರು ರವರು ಒಂದಲ್ಲಾ ಒಂದು ರೀತಿ ವಿನೂತನವಾಗಿ ಆರ್‌ಸಿಬಿ ತಂಡಕ್ಕೆ ಶುಭಾಶಯ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ಬಜಾಜ್ ಚೇತಕ್ ಬೈಕ್.ಇದೀಗ ಫಿಯೆಟ್ ಕಾರೊಂದನ್ನು ವಿನ್ಯಾಸ ಗೊಳಿಸಿ. ಕ್ರಿಕೆಟ್ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ… ಅಲ್ಲದೇ ಫಿಯಟ್ ಕಾರಿನ ಮೇಲೆ “ಈ ಸಲ ಕಪ್ ನಮ್ದೆ” ಎಂದು ಬರೆಸಿ ಆರ್‌ಸಿಬಿ ಮೇಲೆ ಇರುವ ಪ್ರೀತಿ ತೋರಿಸಿದ್ದಾರೆ.
ಅಷ್ಟೇ ಅಲ್ಲದೆ ಕನ್ನಡ ಚಿತ್ರ ರಂಗದ “ನಟರಾದ ಶಂಕರ್ ನಾಗ್. ಪುನಿತ್ ರಾಜ್ ಕುಮಾರ್. ಡಾ. ರಾಜ್ ಕುಮಾರ್. ವಿಷ್ಣುವರ್ಧನ್ ರವರ” ಭಾವಚಿತ್ರಗಳನ್ನು ಕೂಡ ಅಂಟಿಸಿ ಕನ್ನಡ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ.ಅಂದ ಹಾಗೆ ಸಂತೋಷ್ ಸದ್ಗುರು ರವರು ವಿನ್ಯಾಸ ಗೊಳಿಸಿದ ಫಿಯಟ್ ಕಾರನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ “ಕನ್ನಡತಿ” ಧಾರಾವಾಹಿಯ ನಾಯಕಿ ನಟಿ ” ರಜಿನಿ ರಾಘವನ್” ರವರು ಸಾರ್ವಜನಿಕ ಪ್ರದರ್ಶನಕ್ಕಾಗಿ ಕಾರಿನ ಪರದೆ ಸರಿಸುವ ಮೂಲಕ ಚಾಲನೆ ನೀಡಿದರು.
ವಿನೂತನ ಕಾರಿನ ಮುಂದೆ ಸೆಲ್ಫಿ ಗಾಗಿ ಮುಗಿ ಬೀಳುತ್ತಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಆರ್‌ಸಿಬಿ ಮತ್ತು ಕನ್ನಡ ಪ್ರೇಮಿ ಸಂತೋಷ್ ಸದ್ಗುರು ಮಾತನಾಡಿ ಈ ಬಾರಿ ಆರ್‌ಸಿಬಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಈ ಸಲ ಕಪ್ ಗೆದ್ದು ಗೆಲ್ಲುತ್ತದೆ.ಆರ್‌ಸಿಬಿ ಅಭಿಮಾನಿಗಳು ತಮ್ಮ ಪ್ರತಿಯೊಂದು ಪೋಸ್ಟ್‌ನಲ್ಲೂ ‘ಈ ಸಲ ಕಮ್ ನಮ್ದೆ’ ಎಂಬುದನ್ನು ಉಲ್ಲೇಖಿಸುತ್ತಿದ್ದಾರೆ. ಇದು ಕಪ್ ಗೆಲ್ಲಲು RCB ಗೆ ಮತ್ತಷ್ಟು ಹುರಿದುಂಬಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.ಎರಡನೇ ಬಾರಿ ಕಪ್ ಗೆಲ್ಲದಿದ್ದರೂ ಆರ್‌ಸಿಬಿ ಮೇಲಿನ ಅಭಿಮಾನ ಫ್ಯಾನ್ಸ್‌ಗಳಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ.ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ತಂಡವೆಂದರೆ ಅದು ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‌ಸಿಬಿ ಕಪ್ ಗೆಲ್ಲಲಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದರು.
ಮಾಹಿತಿ ಕೃಪೆ : ಮಲೆನಾಡ ರಹಸ್ಯ..!