ಭದ್ರಾವತಿ : ಇಲ್ಲಿನ ಬೊಮ್ಮನಕಟ್ಟೆಯ ಲಕ್ಷ್ಮಮ್ಮ ಎಂಬುವವರು ಕಳೆದ ವರ್ಷ ನವೆಂಬರ್ ನಲ್ಲಿ ಹೊಳೆಸಿದ್ದಾಪುರ ವಾಸಿ ಕೌಶಿಕ್ ಎಂಬುವವರಿಗೆ ಬೊಮ್ಮನಕಟ್ಟೆಯಲ್ಲಿರುವ ಮನೆಯನ್ನು ಮಾರಾಟ ಮಾಡಿ ಹಣವನ್ನು ಪಡೆದು ಈಗ ಹೈಡ್ರಾಮ ನಡೆಸುತ್ತಿರುವ ಘಟನೆ ನಡೆದಿದೆ.
ಹೌದು !! ಮನೆಯನ್ನು ಕಾನೂನು ಪ್ರಕಾರವಾಗಿ 31ಲಕ್ಷ 32000 ಸಾವಿರ ರೂಗಳಿಗೆ ವ್ಯಾಪಾರ ಮಾಡಿ ಹಣ ಪಡೆದು ಭದ್ರಾವತಿ ನೋಂದಣಿ ಕಛೇರಿಯಲ್ಲಿ ಸ್ವತಃ ಅವರೇ ನೋಂದಣಿ ಮಾಡಿಕೊಟ್ಟು ಈಗ ಹೈಡ್ರಾಮ ನಡೆಸಿ ದೇಶಕ್ಕಾಗಿ 20 ವರ್ಷ ಸೈನ್ಯದಲ್ಲಿ ಕಾರ್ಯ ನಿರ್ವಹಿಸಿ ಈಗ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ರವರ ತೇಜೋವಧೆ ನಡೆಸುವ ಹುನ್ನಾರ ಮಾಡುತಿದ್ದಾರೆ.
ನಡೆದಿದ್ದಾರು ಏನು ???
ಮೊನ್ನೆ ದಿನ ಬೊಮ್ಮನಕಟ್ಟೆಯಲ್ಲಿ ಕೌಶಿಕ್ ಒಡೆತನದ ಮನೆಯ ಬಳಿ ಹಳೆಯ ಮಾಲೀಕರಾದ ಲಕ್ಷ್ಮಮ್ಮ ಎಂಬುವವರು ಬಂದು ತೀರಾ ಹೈಡ್ರಾಮ ನಡೆಸಿದ್ದಾರೆ.ಈ ಸಂಧರ್ಭದಲ್ಲಿ ಗಲಾಟೆ,ಹೊಡೆದಾಟ ಜೊತೆಗೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ಮಾಡಿದ್ದಾರೆ ಹಾಗೆ ಹೀಗೆ ಎಂದು ವಿಭಿನ್ನ ಕಥೆ ಕಟ್ಟಿ ದೂರು ಕೂಡ ದಾಖಲಿಸಿದ್ದಾರೆ.
ಕಾರಣ ಲಕ್ಷ್ಮಮ್ಮ ರವರಿಂದ ಮನೆ ಖರೀದಿ ಮಾಡಿರುವ ಹಳೆಸಿದ್ದಾಪುರ ನಿವಾಸಿ ಕೌಶಿಕ್ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ್ ಎಂಬುವವರ ಪುತ್ರ.ಮಂಜುನಾಥ್ ರವರಿಗೆ ಅವರದೇ ಇಲಾಖೆಯಲ್ಲಿ ಕೆಲ ಹಿತಶತ್ರುಗಳಿದ್ದು ಅವರ ಕುಮ್ಮಕ್ಕು ಕೂಡಾ ಇದೆ ಎನ್ನಲಾಗುತ್ತಿದೆ.
ಹೈಡ್ರಾಮ ಯಾಕೆ ????
ಬೊಮ್ಮನಕಟ್ಟೆಯ ಮನೆಯ ಹಳೆ ಮಾಲೀಕರಾದ ಲಕ್ಷ್ಮಮ್ಮ ಅವರ ಒಪ್ಪಿಗೆಯಲ್ಲಿಯೇ ಮನೆ ಮಾರಾಟ ಮಾಡಿದ್ದು ಈಗ ಅವರ ಹಿಂದೆ ಜಿಲ್ಲೆಯ ಚಾಲಾಕಿ ಮಹಿಳೆಯೊಬ್ಬಳ ಕರಿನೆರಳು ಇದೆ ಎಂದು ಬೊಮ್ಮನಕಟ್ಟೆ ನಿವಾಸಿಗಳು ಮಾತನಾಡಿಕೊಳ್ಳುತಿದ್ದಾರೆ.
ಒಟ್ಟಾರೆಯಾಗಿ ಇಲ್ಲಿನ ಮೂಲ ಸಮಸ್ಯೆಯ ಚಿತ್ರಣವನ್ನು ಪೊಲೀಸ್ ಇಲಾಖೆ ಕೂಲಂಕುಷವಾಗಿ ಪರಿಶೀಲಿಸಿದರೆ ಸಾಕು ಯಾರ ತಪ್ಪು ಯಾರ ಸರಿ ಎಂಬುವುದು ತಿಳಿಯುತ್ತದೆ.ಹಾಗೇಯೆ ಕ್ಷುಲ್ಲಕ ಆರೋಪಗಳಿಗೆ ಬೆಂಬಲಿಸದೇ ದೇಶಕ್ಕಾಗಿ ಭಾರತೀಯ ಸೇನೆಯಲ್ಲಿ 20 ವರ್ಷಗಳ ಸೇವೆ ಸಲ್ಲಿಸಿ ಈಗ ಪೊಲೀಸ್ ಇಲಾಖೆಯಲ್ಲಿ ನಿಷ್ಟಾವಂತರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ರವರಿಗೆ ಗೌರವ ಸೂಚಿಸುವುದು ಕೂಡಾ ಇಲಾಖೆಯ ಬಹುಮುಖ್ಯ ಜವಬ್ದಾರಿಯಾಗಿದೆ.