ರಿಪ್ಪನ್ ಪೇಟೆ: ಚಿಕ್ಕ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸಾರ್ವಜನಿಕರು ಓಡಾಡುವ ಗ್ರಾಮಠಾಣ ರಸ್ತೆಗೆ ಗೇಟ್ ನಿರ್ಮಾಣಮಾಡಿ ಬೀಗ ಹಾಕಿ ರೈತರು ತಮ್ಮ ಹೊಲಗದ್ದೆಗಳಿಗೆ ಓಡಾಡದಂತೆ ಅಡ್ಡಿ ಉಂಟು ಮಾಡಿರುವ ಘಟನೆ ನಡೆದಿದೆ.
ಶಾಂತಪುರ ಮತ್ತು ಕೇಶವಪುರ ನಡುವಿನ ಹೊಸಹಳ್ಳಿ ಗ್ರಾಮದ ರೈತ ಕುಟುಂಬಗಳು ತಮ್ಮ ಹೊಲಗಳಿಗೆ ಹೋಗಲು ಕಳೆದ ಕೆಲವು ದಶಕಗಳಿಂದಲೂ ಗ್ರಾಮಠಾಣ ರಸ್ತೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಹೊಸಹಳ್ಳಿಯ ಖಾಸಗಿ ವ್ಯಕ್ತಿಯೊಬ್ಬ ಗ್ರಾಮ ಠಾಣದ ರಸ್ತೆಗೆ ಗೇಟ್ ನಿರ್ಮಾಣ ಮಾಡಿ ಬೀಗ ಹಾಕಿ ರೈತರುಗಳು ತಮ್ಮ ಹೊಲಗದ್ದೆಗಳಿಗೆ ಹೋಗದಂತೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ತಮ್ಮ ಅಳಲನ್ನು ಮಾಧ್ಯಮದವರಲ್ಲಿ ತೋರಿಕೊಂಡಿದ್ದಾರೆ.
ಜೇನಿ ಗ್ರಾಮ ಪಂಚಾಯಿತಿಯ ಅನುದಾನದಿಂದ ಆಗಿನ ಅದೇ ವಾರ್ಡಿನ ಗ್ರಾಪಂ ಸದಸ್ಯರಾದ ಸ್ವಾಮಿ ರವರು ರೈತರು ತಮ್ಮ ಹೊಲಗದ್ದೆಗಳಿಗೆ ಓಡಾಡಲು ಹಾಗೂ ರೈತ ಪರಿಕರಗಳನ್ನು ತಮ್ಮ ಹೊಲಗದ್ದೆಗಳಿಗೆ ಸಾಗಿಸಲು ಅನುಕೂಲವಾಗುವಂತೆ ಕಳೆದ ಕೆಲವು ದಶಕಗಳ ಹಿಂದೆ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದರು.
ಆದರೆ ಈಗ ಅದೇ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯು ಕಬ್ಬಿಣದ ಗೇಟಿನ ನಿರ್ಮಾಣಮಾಡಿ ಬೀಗ ಹಾಕಿ ರೈತರುಗಳು ತಮ್ಮ ಹೊಲಗಳಿಗೆ ಹೋಗದಂತೆ ತಡೆದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಭೂಮಾಲಿಕನೊಬ್ಬ ಕಬ್ಬಿಣದ ಗೇಟ್ ನಿರ್ಮಾಣಮಾಡಿ ಬೀಗ ಹಾಕಿ ಓಡಾಡದಂತೆ ಮಾಡಿರುವ ಬಗ್ಗೆ ಈಗಾಗಲೇ ಗ್ರಾಮಾಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಸಹ ಮಾಲೀಕನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ರೈತರು ಓಡಾಡುವ ಗ್ರಾಮಠಾಣ ರಸ್ತೆಗೆ ಗೇಟ್ ಮಾಡಿ ಬೀಗ ಹಾಕಿರುವುದನ್ನು ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೊಸಳ್ಳಿ ರೈತ ರವಿ ತಮ್ಮ ಅಳಲನ್ನು ಮಾಧ್ಯಮಗಳ ಎದುರಿಗೆ ತೋರಿಕೊಂಡಿದ್ದಾರೆ.
ಈಗಾಗಲೇ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಠಾಣ ರಸ್ತೆಗೆ ಗೇಟ್ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಸೂಚಿಸಿದ್ದರು ಸಹ ಗ್ರಾಮಾಡಳಿತ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನಾದರೂ ಗ್ರಾಮಾಡಳಿತ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗ್ರಾಮಠಾಣ ರಸ್ತೆಗೆ ಕಬ್ಬಿಣದ ಗೇಟನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿ ಕೊಡುತ್ತಾರೋ ಎಂದು ಕಾದು ನೋಡಬೇಕು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇