Headlines

ಶಾಸಕ ಹರತಾಳು ಹಾಲಪ್ಪ ಜನ್ಮ ದಿನದ ಪ್ರಯುಕ್ತ ರಿಪ್ಪನ್ ಪೇಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ :


ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೋರಾಟ, ಜನಸೇವೆ ಮೂಲಕ ಇಡೀ ಕ್ಷೇತ್ರದ ಮನೆ ಮಾತಾಗಿರುವ ರಾಜಕಾರಣಿ.


ಇಂದು ಹರತಾಳು ಹಾಲಪ್ಪ ರವರ ಜನ್ಮ ದಿನದ ಪ್ರಯುಕ್ತ,
ಕೆರೆಹಳ್ಳಿ ಹೋಬಳಿಯ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ರಿಪ್ಪನಪೇಟೆಯ ಇತಿಹಾಸ ಪ್ರಸಿದ್ದ ಶ್ರೀ ಸಿದ್ದೀವಿನಾಯಕ ದೇವಸ್ಥಾದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಶಾಸಕರಿಗೆ ಉತ್ತಮ ಆರೋಗ್ಯ, ದೀರ್ಘಯುಷ್ಯ, ಉನ್ನತ ಅಧಿಕಾರ ಹಾಗೂ ಸಾರ್ವಜನಿಕ ಸೇವೆ ಮಾಡಲು ಹೆಚ್ಚಿನ ಅವಕಾಶಗಳು ಲಭಿಸಲೆಂದು ಪ್ರಾರ್ಥಿಸಲಾಯಿತು.

ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಬಡವರು, ನಿರ್ಗತಿಕರು, ದೀನದಲಿತರ ಸೇವೆ ಮಾಡುವ ಯಾವುದೇ ವ್ಯಕ್ತಿಗೆ ಸಮಾಜ ಸೇವೆಯೊಂದಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಎಂತಹ ಅಡೆತಡೆಗಳನ್ನಾದರೂ ಮೆಟ್ಟಿ ನಿಂತು ಸಾಧಿಸಬಲ್ಲರು ಎಂಬುದಕ್ಕೆ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹರತಾಳು ಹಾಲಪ್ಪ ಸಾಕ್ಷಿಯಾಗಿದ್ದಾರೆ ಎಂದರು.


ಈ ಸಂಧರ್ಭದಲ್ಲಿ  ಬಿಜೆಪಿ ಜಿಲ್ಲಾ ಮುಖಂಡರಾದ ಆರ್ ಟಿ ಗೋಪಾಲ್, ಎ ಟಿ ನಾಗರತ್ನಮ್ಮ, ಶಾಸಕರ ಆಪ್ತ ಸಹಾಯಕರಾದ ಕೀರ್ತಿ ಗೌಡ, ಮಂಜುಳಾ ಕೇತಾರ್ಜಿ ರಾವ್, ಮಹಾಲಕ್ಷ್ಮಿ ಅಣ್ಣಪ್ಪ, ಸುಂದರೇಶ್, ಸುರೇಶ್ ಸಿಂಗ್, ಸುದಿಂದ್ರ ಪೂಜಾರಿ, ನಾಗರತ್ನ ದೇವರಾಜ್, ಹೂವಪ್ಪ, ವಿನೋದಮ್ಮ, ತಾ.ಮ ನರಸಿಂಹ, ಮಲ್ಲಿಕಾರ್ಜುನ ಜಿ.ಡಿ, ದೇವೇಂದ್ರಪ್ಪ ಗೌಡ, ದೀಪಾ ಸುಧೀರ್, ದಾನಮ್ಮ, ಉಮಾ ಸುರೇಶ್, ಲಕ್ಸ್ಮಿ ಶ್ರೀನಿವಾಸ್, ಸೀತಮ್ಮ, ನಾಗೇಶ್, ಈಶ್ವರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Exit mobile version