Headlines

ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಚಾನೆಲ್ ಗೆ ಇಳಿದ ಕಾರು : ಒಬ್ಬರ ಸಾವು

ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ತುಂಗಾ ಚಾನೆಲ್ ಗೆ ಕಾರು ಬಿದ್ದು  ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ 2 ಗಂಟೆಯ ಸಮಯದಲ್ಲಿ ಸಂಭವಿಸಿದೆ.

ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮ.ಇ(28) ಮೃತ ದುರ್ಧೈವಿ.


ಸುಷ್ಮ ಮತ್ತು ಪತಿ ಚೇತನ್ ಕುಮಾರ್ ತುಮಕೂರಿನಲ್ಲಿರುವ ಅತ್ತೆಗೆ (ಚೇತನ್ ತಾಯಿಗೆ) ಎದೆ ನೋವು ಕಾಣಿಸಿಕೊಂಡಿದ್ದರಿಂದ ತುಮಕೂರಿಗೆ ಕಾರಿನಲ್ಲಿ ಹೊರಟಿದ್ದಾರೆ.

ನವೋದಯ ಕ್ವಾಟ್ರಸ್ ನಲ್ಲಿ ತಂಗಿದ್ದ ಪತಿ ಮತ್ತು ಪತ್ನಿ KA 06 C 5275 ಕ್ರಮಸಂಖ್ಯೆಯ ಟಾಟಾ ಇಂಡಿಕಾ ಕಾರಿನಲ್ಲಿ ಹೊರಟಿದ್ದಾರೆ.
ನವೋದಯ ಕ್ವಾಟ್ರಸ್ ನಿಂದ ಸೊಲ್ಲಾಪುರ-ಮಂಗಳೂರು ಹೈವೆಗೆ ತಲುಪಲು ಸ್ವಲ್ಪ ದೂರ ತುಂಗ ಚಾನೆಲ್ ನ ಏರಿ ಮೇಲೆ ಸಾಗಬೇಕಿದೆ. ಈ ಟಾರ್ ರಸ್ತೆಯ ಮೇಲೆ ಬರುವ ವೇಳೆ ಬೆಳಗ್ಗಿನ ಜಾವ ಹಾವೊಂದು ಅಡ್ಡ ಬಂದಿದೆ.ಚೇತನ್ ಕುಮಾರ್ ಹಾವು ಅಡ್ಡ ಬಂದ ಹಿನ್ನಲೆಯಲ್ಲಿ ಸಡನ್ ಆಗಿ ಕಾರಿನ ಬಲಗಡೆ ತಿರುಗಿಸಿದ್ದಾರೆ. ಚಾನೆಲ್ ಗೆ ಕಾರು ಇಳಿದಿದೆ. ಚಾನೆಲ್ ನಲ್ಲಿ ನೀರು ಅಧಿಕವಾಗಿರುವುದರಿಂದ ಕಾರನ್ನೇ ನೀರು ತೇಲಿಸಿಕೊಂಡು ಮಧ್ಯಭಾಗಕ್ಕೆ ಕರೆದೊಯ್ದಿದೆ.

ತಕ್ಷಣವೇ ಚೇತನ್ ಕುಮಾರ್ ಕಾರಿನಿಂದ ಇಳಿದು ಪತ್ನಿಯನ್ನ ಬಚಾವ್ ಮಾಡಲು ಮುಂದಾಗಿದ್ದಾರೆ. ನೀರಿನಲ್ಲಿಯೇ  ಸುಷ್ಮರವರನ್ನ ಹಿಡಿದಿಟ್ಟುಕೊಂಡಿದ್ದಾರೆ. ಸಹಾಯಕ್ಕಾಗಿ ಕೂಗಿದ್ದಾರೆ. ಬೆಳಗ್ಗಿನ ಜಾವವಾಗಿದ್ದರಿಂದ ಯಾರಿಗೂ ಇವರ ಕೂಗು ಕೇಳಲಿಲ್ಲ.

ಸುಮಾರು 1 ಗಂಟೆಯ ವರೆಗೆ ಕೂಗಿದರೂ ಸಕಾಲದಲ್ಲಿ ಯಾರೂ ಬಾರದ ಹಿನ್ನಲೆಯಲ್ಲಿ ಸುಷ್ಮ ನೀರು ಕುಡಿದಿದ್ದಾರೆ. 1 ಗಂಟೆಯ ಬಳಿಕ ಗ್ರಾಮಸ್ಥರು ಇವರು ಶಬ್ದ ಕೇಳಿ ಸ್ಥಳಕ್ಕೆ ಬಂದು ಚೇತನ್ ಕುಮಾರ್ ಹಾಗೂ ಸುಷ್ಮಾ ರವರನ್ನು ದಡಕ್ಕೆ ತಂದಿದ್ದಾರೆ. ಆದರೆ ಅಷ್ಟರೊಳಗೆ ಸುಷ್ಮಾ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

Exit mobile version