ಒಕ್ಕಲಿಗರ ಸಂಘ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ – ಆರ್ ಎಂ ಮಂಜುನಾಥ್ ಗೌಡ
ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಒಕ್ಕಲಿಗರ ಸಮಾಜವು ಜನಸಂಖ್ಯೆಯಲ್ಲಿ ಕಡಿಮೆಯಾದರೂ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಬಡವರ ಸಹಾಯಕ್ಕೆ ಸದಾ ಕೈಚಾಚಿ ಸಮಾಜದಲ್ಲಿ ಮಾದರಿಯಾಗುತ್ತಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು.
ರಿಪ್ಪನ್‌ಪೇಟೆಯ ವಿಶ್ವಮಾನವ ಒಕ್ಕಲಿಗರ ಸಭಾಭವನದ ಹಿಂಭಾಗದಲ್ಲಿ ನೂತನ ಅಡುಗೆ ಕೊಠಡಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, “ಒಕ್ಕಲಿಗ ಸಮಾಜವು ತನ್ನ ಸಂಘಟನೆಯೊಂದಿಗೆ ಇತರ ಸಮಾಜಗಳನ್ನೂ ಪ್ರೀತಿ–ವಿಶ್ವಾಸದಿಂದ ಸ್ವೀಕರಿಸುತ್ತದೆ. ಕುವೆಂಪುರವರ ‘ಸರ್ವಜನಾಂಗದ ಶಾಂತಿಯ ತೋಟ’ದ ಕನಸನ್ನು ನನಸಾಗಿಸುವ ದಾರಿಯಲ್ಲಿ ನಮ್ಮ ಸಮಾಜ ನಡೆದುಕೊಳ್ಳುತ್ತಿದೆ. ದುರ್ಬಲರನ್ನು ಮುಖ್ಯವಾಹಿನಿಗೆ ತಂದು, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯದಲ್ಲಿ ಈ ಸಂಘಟನೆಯು ಮುಂಚೂಣಿಯಲ್ಲಿದೆ” ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ ತಾಲ್ಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ್, ಬೆಂಗಳೂರಿನ ಉದ್ಯಮಿ ಸರಳ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಇಂಜಿನಿಯರ್ ವೀರೇಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪರಮೇಶ್ ಎಂ ಎಂ,ತಾಲೂಕು ಕೆಡಿಪಿ ಸದಸ್ಯ ಆಸೀಫ಼್ ಭಾಷಾ, ಹೆಚ್.ವಿ.ಹರೀಶ್, ವಜ್ರಾಕ್ಷಿ, ಇ.ಡಿ.ಮಂಜುನಾಥ, ಟಿ.ಎಂ. ಕೃಷ್ಣಮೂರ್ತಿ, ಷಣ್ಮುಖಪ್ಪಗೌಡ, ಕಲ್ಲೂರು ತೇಜಮೂರ್ತಿ, ಸಂತೋಷ್ ಕುಮಾರ (ಚಿಂತು), ಹೆಚ್.ಪಿ.ರಾಜೇಶ, ಹೆಚ್.ಆರ್.ಅಶೋಕ ಹಾಲುಗುಡ್ಡೆ, ಶ್ರೀಧರ ಕಲ್ಲೂರು, ಎಸ್.ರಾಜು, ಸುಮಂಗಳ, ಕೃಷ್ಣಮೂರ್ತಿ, ಡ್ರೈವರ್ ಮಂಜುನಾಥ ಕೋಟೆತಾರಿಗ, ಮಹೇಶ ಕೋಟೆತಾರಿಗ ಇನ್ನಿತರರು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಎಂ ಎಂ ಪರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.