ಸಾಗರ: ನಿಗೂಢವಾಗಿ ಕಣ್ಮರೆಯಾಗಿದ್ದ “”ಪ್ರಕಾಶ್ ಟ್ರಾವೆಲ್ಸ್” ಮಾಲೀಕ ಶವವಾಗಿ ಪತ್ತೆ! ನಿಜಕ್ಕೂ ಇದು ಆತ್ಮಹತ್ಯೆಯೇ…? “ಪಟಗುಪ್ಪೆ” ಸುತ್ತಾ, ಈಗ ಅನುಮಾನದ ಹುತ್ತ…!

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಅಳಿಯ ಕಾಫೀ ಡೇ ಸಿದ್ಧಾರ್ಥ್ ಆತ್ಮಹತ್ಯೆಯ ಪ್ರಕರಣದಂತೆಯೇ ಸಾಗರದ ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕರಾದ ಪ್ರಕಾಶ್ ರವರ ನಿಗೂಢ ನಾಪತ್ತೆ ಪ್ರಕರಣವೂ ಸಹ ನೋಡಲು ಒಂದೇ ರೀತಿಯಾಗಿ ಕಾಣುತ್ತಿದೆ! ಯಾಕಂದ್ರೇ, ಎಲ್ ಎನ್ ಟಿ ಇನ್ನಿತರೆ ತೀರಾ ಟಾರ್ಚರ್ ಕೊಡುವ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಮಾಡಿಕೊಂಡಿದ್ದ ಸಿದ್ಧಾರ್ಥ್ ರವರು ದಿಕ್ಕೇ ಕಾಣದಂತಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಇದೇ ಪ್ರಕರಣದಂತೆಯೆ ಪ್ರಕಾಶ್ ರವರು ಸಹ ಸಾಲ ಸೋಲಕ್ಕೆ ಅಂಜಿ ಅಥವಾ ಸಾಲ ಕೊಟ್ಟವರ ಕಿರುಕುಳ ತಾಳಲಾರದೇ ತಾವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎನ್ನುವ ಪ್ರಶ್ನೆ ಎಲ್ಲೆಡೆ ಚರ್ಚೆಯಾಗುತ್ತಿದೆ!


ಈ ಪ್ರಶ್ನೆ ಮೂಡಲು ಹತ್ತು ಹಲವು ಕಾರಣಗಳು ಇವೆ, “ಕೊರೋನಾ” ದಂತಹ ಸಂಧಿಗ್ಧ ಪರಿಸ್ಥಿತಿಯು ಅದು ಎಂತೆಂಥ ಜನರನ್ನು ತಣ್ಣಗಾಗಿಸಿ ಬಿಟ್ಟಿದೆ, ಕೆಳ ವರ್ಗ, ಮಧ್ಯಮ ವರ್ಗ ಅನ್ನದೆ ಫೈನಾನ್ಸು ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಓಡಾಡುವ ಎಷ್ಟೋ ಗೂಡ್ಸ್ ವಾಹನಗಳು, ಬಸ್ಸು ಮಾಲೀಕರ ಸ್ಥಿತಿಯೂ ತೀರಾ ಶೋಚನೀಯ ಸ್ಥಿತಿಗೆ ತಲುಪಿತ್ತು, ನೋಡಲು ಹತ್ತಿಪ್ಪತ್ತು ಬಸ್ಸುಗಳು ಎಂಥವರನ್ನು ಹುಬ್ಬೇರಿಸುವಂತೆ ಮಾಡಿಬಿಡುತ್ತೆ! ಆದರೆ ಕೆಲ ಬಸ್ಸು ಮಾಲೀಕರ ಒಳ ನೋವು ಯಾರಿಗೂ ಕಾಣಿಸದು ಬಿಡಿ, ಕೊರೋನ, ಲಾಕ್ಡೌನ್, ಫೈನಾನ್ಸು, ಲೋನು ಹೀಗೆ ಹಲವಾರು ಕಾರಣಗಳಿಂದ ಎಷ್ಟೋ ಬಸ್ಸು ಮಾಲೀಕರು ತಮ್ಮ ಬಸ್ಸುಗಳನ್ನೇ ಮಾರಿ ಬಿಟ್ರು, ಅದಕ್ಕೆ “ಟಿ.ಸಿ.ಎಸ್ ಕೊಪ್ಪ” ಸಾರಿಗೆ ಸಂಸ್ಥೆಯು ಜ್ವಲಂಥ ಉದಾಹರಣೆ! ಅಂಥ ಇಪ್ಪತ್ತು ವರ್ಷ ಹಳೆಯ ಸಾರಿಗೆ ಸಂಸ್ಥೆಯೇ ಆ ಮಟ್ಟಕ್ಕೆ ನಷ್ಟವನ್ನು ಅನುಭವಿಸಿ ಧೂಳಿಪಟ ಆಗಿಹೋದರೆ, ಇನ್ನೂ ಸಣ್ಣ ಪುಟ್ಟ ಬಸ್ಸು ಮಾಲೀಕರ ಕಥೆ ಏನಾಗಬೇಡ ಅಲ್ವಾ? ಒಂದು ವೇಳೆ, ಈ ಬಸ್ಸು ಅನ್ನೋದು ನಷ್ಟವನ್ನು ಅನುಭವಿಸಿದರೆ ಹೇಗೆ ಮೊದಲು ಅದರ ಮಾಲೀಕ, ಜೊತೆಗೆ ಅದಕ್ಕೆ ನಂಬಿರುವ ಡ್ರೈವರ್, ಕ್ಲಿನರ್, ಏಜೆಂಟ್ರು ಇನ್ನೂ ಎಷ್ಟೋ ಜನರ ಜೀವನದಲ್ಲಿ ಇದ್ದಕ್ಕಿದಂತೆ ಬ್ಯಾಲೆನ್ಸ್ ತಪ್ಪಿದಂತೆ ಆಗಿಬಿಡುತ್ತೆ!



ಇಷ್ಟೆಲ್ಲಾ ವಿವರಣೆಗಳನ್ನು ಯಾಕಾಗಿ ನೀಡುವುದು ಸೂಕ್ತ ಅನಿಸಿತು ಅಂದ್ರೇ,
ರಾತ್ರಿಯ ಸಮಯದಲ್ಲಿ ಹೊಸನಗರ ಸಮೀಪದ ಪಟಗುಪ್ಪೆ ಸೇತುವೆಯ ಬಳಿ ಪ್ರಕಾಶ್ ರವರ ಕಾರು, ಮೊಬೈಲು, ಅವರ ಚಪ್ಪಲಿಯು ಪತ್ತೆಯಾಗಿರುವುದು ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯ ಪ್ರಕರಣ ಎಂದೇ ಕಾಣುತ್ತದೆ, ಕಳೆದೆರೆಡು ದಿನಗಳಿಂದಲೂ ಸಹ ಅಗ್ನಿಶಾಮಕ ದಳ, ಮುಳುಗು ತಜ್ಞರು, ಪ್ರಕಾಶ್ ರವರ ನಂಬಿ ಜೀವನ ಸಾಗಿಸುತಿದ್ದ ನೂರಾರು ಜನ, ಸ್ಥಳೀಯರೆಲ್ಲರೂ ಎಡೆಬಿಡದೆ ಹುಡುಕಾಟದಲ್ಲಿ ತೊಡಗಿದ್ದಾರೆ, ಪೊಲೀಸರು ಸಹ ಈ ನಿಗೂಢ ನಾಪತ್ತೆ ಪ್ರಕರಣವನ್ನು ಬೇಧಿಸಲು ಹೊರಟಿದ್ದಾರೆ, ಆದರೆ, ಪ್ರಕಾಶ್ ರವರನ್ನ ಕೆಲ ಬಲ್ಲವರು “ಪ್ರಕಾಶ್ ಎಂದಿಗೂ ಸಾಲ ಸೋಲಕ್ಕೆ ಹೆದರುವ, ಆತ್ಮಹತ್ಯೆ ಮಾಡಿಕೊಳ್ಳುವ ಮನುಷ್ಯ ಅಲ್ಲ” ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ, ಹಾಗಾದರೆ ಏನಾಗಿರಬಹುದು?

ಸಾಲಕ್ಕೆ ಯಾರೂ ಸಹ ಈ ಕಾಲದಲ್ಲಿ ಹೆದರಿಕೊಳ್ಳುವುದಿಲ್ಲ ನಿಜ ಮಾರಾಯ್ರೆ, ಆದರೆ ಸಾಲ ಕೊಟ್ಟ ಕೆಲ ಸಂಸ್ಥೆಗಳು, ವ್ಯಕ್ತಿಗಳು ಮಾಡುವ ಟಾರ್ಚರ್ ಇದೆ ಅಲ್ವಾ ಅದನ್ನೂ ಸಭ್ಯ ವ್ಯಕ್ತಿಯೊಬ್ಬ ನಿಜಕ್ಕೂ ತಾಳಲಾರನು! ಯಾಕಂದ್ರೇ ಇಂದು ಆ ಮಟ್ಟಿಗೆ ಕೆಲ ಫೈನಾನ್ಸುಗಳು ತಮ್ಮ ಲೋನ್ ರಿಕವರಿ ಮಾಡಲು ಇನ್ನಿಲ್ಲದ ಮಾನಸಿಕ ಚಿತ್ರ ಹಿಂಸೆ ನೀಡುತ್ತವೆ!

ಅದಿರಲಿ, ಒಂದು ವೇಳೆ ಪ್ರಕಾಶ್ “ಅಪಹರಣ”ವಾಗಿದ್ದರೆ? ಆ ಬಗ್ಗೆಯೂ ಇನ್ವೆಸ್ಟಿಗೇಷನ್ ನಡೆಯುತ್ತಿರಬಹುದು, ಇದೊಂದು “ಅಪಹರಣ” ಅಥವಾ “ಕೊಲೆ”ಮಾಡುವ ಉದ್ದೇಶದ ಸಂಭವದ ಪ್ರಕರಣವಾಗಿ ಕಾಣುವುದಿಲ್ಲ, ಏಕೆಂದರೇ, ಅಪಹರಣ ವಾಗಿದ್ದರೆ ರಾತ್ರಿಯ ಸಮಯ ಅದು ಹೊಸನಗರ ಪಟಗುಪ್ಪೆ ಸೇತುವೆಯ ಬಳಿ ಇವರ ಮೊಬೈಲು, ಕಾರು, ಚಪ್ಪಲಿ ಸಿಗಲು ಸಾಧ್ಯವೇ ಇಲ್ಲ, ಅಥವಾ ಕೊಲೆ ಇನ್ಯಾವುದೇ ಅಹಿತಕರ ಘಟನೆ ನಡೆದಿರುವ ಸಂಭವವೂ ತೀರಾ ಕಡಿಮೆ, ಏಕೆಂದರೇ, ಈ ಸೇತುವೆಯ ಅಥವಾ ರಾತ್ರಿಯ ಹೊತ್ತು, ಒಂದೋ ಇವರನ್ನು ಕಿಡ್ನಾಪ್ ಮಾಡಿ ಒತ್ತಾಯ ಪೂರ್ವಕವಾಗಿ ಕರೆದೋಯ್ದಿರಬೇಕು  ಅಷ್ಟೇ, ಪಟಗುಪ್ಪೆ ಸೇತುವೆಯ ಬಳಿ ಸಿಕ್ಕ ಎಲ್ಲಾ ಆಧಾರಗಳನ್ನು ಗಮನಿಸಿದರೆ, ಖುದ್ದು ಪ್ರಕಾಶ್ ರವರೇ ಆ ಸ್ಥಳಕ್ಕೆ ತಲುಪಿದ್ದಾರೆ ಅನ್ನಿಸುತ್ತದೆ, ಅಥವಾ ಈ ಪಟಗುಪ್ಪೆ ಸೇತುವೆಯ ಬಳಿ ಸಿಕ್ಕ ಎಲ್ಲಾ ವಸ್ತುಗಳ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಯಾರೋ ಇವರನ್ನು ಕೊಲೆ ಮಾಡುವ ಸಲುವಾಗಿ ಸಂಚು, ಷಡ್ಯಂತ್ರ ರೂಪಿಸಿ ಪಟಗುಪ್ಪೆಯ ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಕರೆತರುವ ಸಾಧ್ಯತೆಗಳು ಕಡಿಮೆ ಅನಿಸುತ್ತೆ, ಇನ್ನೂ ಸಿ.ಸಿ.ಟಿ.ವಿ ಫುಟೇಜ್, ಆಪ್ತರ, ಕೆಲವರ ಹೇಳಿಕೆಗಳಿಂದ ಏನಾದರು ಸತ್ಯ ಹೊರಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ, ಹೇಳಿ ಕೇಳಿ ಪ್ರಕಾಶ್ ರವರು ಸಭ್ಯ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿ ಎಂಬುದು ಇಡೀ ಸಾಗರಕ್ಕೆ ತಿಳಿದಿದೆ, ಕೆಲ ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಹೊಡಿ ಬಡಿ ಬೈಗುಳಗಳು ಸಾಮಾನ್ಯವೇ ಆದರೂ ಪ್ರಕಾಶ್ ರವರು ಇಂಥವಕ್ಕೆ ಆಸ್ಪದ ಕೊಡದ ವಿಚಾರವು ಎಲ್ಲರಿಗೂ ತಿಳಿದಿದೆ, ಹೆಚ್ಚಾಗಿ ಕಣ್ಮರೆಯಾದ ದಿನದಂದೇ ಪಕ್ಕಾ ಆತ್ಮಹತ್ಯೆಯೇ ಮಾಡಿಕೊಂಡಿರಬಹುದು ಎಂಬ ಬಲವಾದ ವಾದದಲ್ಲಿ ಎಲ್ಲರೂ ತೊಡಗಿದ್ದರು, ಪ್ರಕಾಶ್ ರನ್ನ ಹತ್ತಿರದಿಂದ ಕಂಡವರು ಬೇರೆ ಬೇರೆ ತರಹದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದರು.

ಕ್ಷೇತ್ರದ ಶಾಸಕರು ಸ್ಥಳಕ್ಕೆ ದೌಡಾಯಿಸಿ ರೊಚ್ಚಿಗೇಳುತ್ತಿದ್ದವರನ್ನು ಸಮಾಧಾನ ಪಡಿಸಿ, ಪ್ರಕಾಶರನ್ನು ಪತ್ತೆ ಹಚ್ಚಲು ಸಂಪೂರ್ಣವಾಗಿ ಸಾಥ್ ನೀಡುವ ಮಾತುಗಳನ್ನು ಆಡಿದ್ದರು, ಪೊಲೀಸರು ಸಹ ಈ ಪ್ರಕರಣವನ್ನು ವಿಶೇಷ ಕಾಳಜಿವಹಿಸಿ ಹ್ಯಾಂಡಲ್ ಮಾಡುತ್ತಿದೆ ಎನ್ನಬಹುದು, ಒಟ್ಟಿನಲ್ಲಿ, ಯಾರೊಬ್ಬರೂ ಇಂತಹ ಮನುಷ್ಯನಿಗೆ ಹೀಗೆ ಆಗಬಾರದಿತ್ತು, ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಇವರು ಸಾಲ ಅಥವಾ ಯಾವುದಕ್ಕೂ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ ಎನ್ನುವುದನ್ನೇ ಪುನರ್ ಉಚ್ಚಾರ ಮಾಡುತ್ತಿದ್ದಾರೆ, ಹಾಗಾದರೆ ಪ್ರಕಾಶ್ ರವರ ಆತ್ಮಹತ್ಯೆಯೋ? ಕೊಲೆಯೋ? ಅಥವಾ ಯಾರದಾದರೂ ಹಳೆ ದ್ವೇಷದ ಪ್ರತೀಕಾರವೋ? ಎನ್ನುವುದನ್ನೂ ಪೊಲೀಸರ ಪೂರ್ಣ ತನಿಖೆ ನಂತರವಷ್ಟೇ ತಿಳಿಯಬಹುದು, ನೂರಾರು ಕುಟುಂಬಗಳಿಗೆ ಆಶ್ರಯದಂತಿದ್ದ ಪ್ರಕಾಶ್ ರ ಅಕಾಲಿಕ ಅಗಲಿಕೆ ಇಂದಾಗಿ, ಇಂದು ಅವರ ಸಂಸ್ಥೆಯಲ್ಲಿ ದುಡಿದು ತಿನ್ನುವವರು, ನಂಬಿದವರು ಈಗ ಬೀದಿಗೆ ಬಿದ್ದಂತಾಗಿದೆ, ಅವರ ಬದುಕು ಈಗ ಅಕ್ಷರಶಃ ಚಿಂದಿ ಚಿತ್ರಾನ್ನದಂತಾಗಿದೆ! ಎಲ್ಲರಲ್ಲೂ ಮೋಡ ಕವಿದ ವಾತಾವರಣದಂತೆ ಆತಂಕ, ಬೇಸರ ಮುಗಿಲು ಮುಟ್ಟಿದಂತೆ ಆಗಿದೆ!

ಒಂದು ವೇಳೆ ಈ ಸಾವಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದು ಯಾವ ಖಾಸಗಿ ಸಾಲ ಸಂಸ್ಥೆ ಅಥವಾ ಯಾರೇ ಆಗಿರಲಿ, ಅಂಥವರನ್ನು ಒದ್ದು ಒಳಗೆ ಹಾಕಬೇಕು, ಕಠಿಣ ಶಿಕ್ಷೆಯಾಗಬೇಕು ಎನ್ನುವ ಮಾತುಗಳು ಅಲ್ಲಲ್ಲಿ ಈಗ ಕೇಳಿ ಬರುತ್ತಿವೆ…



@ ಶಿವಮೊಗ್ಗ ಮನ್ಸೂರ್ .ಸಾಗರ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು

ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು ರಿಪ್ಪನ್ ಪೇಟೆ : ಬಾಳಿನ…

6 hours ago

ಸೆ.5ರ ಶಿಕ್ಷಕರ ದಿನಾಚರಣೆಗೆ ಗೈರು; ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಆರೋಪ

ಸೆ.5ರ ಶಿಕ್ಷಕರ ದಿನಾಚರಣೆಗೆ ಗೈರು; ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಆರೋಪ BJP leaders in Sagar have…

6 hours ago

ಈದ್ ಮಿಲಾದ್ ಮೆರವಣಿಗೆಯಲ್ಲಿ ಮಾದಕ ವ್ಯಸನ ವಿರುದ್ಧ ಸಮರ: ‘ಗಾಂಜಾ ಬೇಡ ಬ್ರೋ’ ಅಭಿಯಾನಕ್ಕೆ ಭರ್ಜರಿ ಸ್ಪಂದನೆ

ಯುವಶಕ್ತಿಯೇ ಎಚ್ಚೆತ್ತುಕೋ: ಈದ್ ಮಿಲಾದ್ ಸಂಭ್ರಮದಲ್ಲಿ ಮೊಳಗಿದ ‘ನಶಾಮುಕ್ತ ಭಾರತ’ ಸಂದೇಶ Ripponpete Police launched an anti-drug awareness…

12 hours ago

ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ

ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ High drama…

1 day ago

ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ!

ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ! An…

1 day ago

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…

2 days ago