ಪೋಸ್ಟ್ ಮ್ಯಾನ್ ನ್ಯೂಸ್ ವರದಿಗೆ ಬೆಚ್ಚಿಬಿದ್ದ ಮರಳು ಮಾಫಿಯಾದವರು……! ಮರಳು ಸಂಗ್ರಹಿಸುವ ಪರಿಕರಗಳೊಂದಿಗೆ ಗವಟೂರು ಹೊಳೆಯ ದಡದಿಂದ ಎಸ್ಕೇಪ್ …!

ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಶರ್ಮಿಣ್ಯಾವತಿ ನದಿಯ (ಗವಟೂರು ಹೊಳೆ) ದಡದಲ್ಲಿ ಲಕ್ಷಾಂತರ ರೂಪಾಯಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮರಳು ಮಾಫಿಯಾದ ವಿರುದ್ಧ ಭಾನುವಾರ ಪೋಸ್ಟ್ ಮ್ಯಾನ್ ವರದಿ ಮಾಡಿತ್ತು. ಇದನ್ನು ಗಮನಿಸಿದ ಮರಳು ಮಾಫಿಯಾದವರು ಹಾಗೂ ಮರಳು ದಂಧೆಕೋರರು ಮರಳು ಸಂಗ್ರಹಣೆಗಾಗಿ ತಂದಿಟ್ಟಿದ್ದ ಪರಿಕರಗಳನ್ನು ತೆಗೆದುಕೊಂಡು ಕೆಲಸಗಾರರೊಂದಿಗೆ ಎಸ್ಕೇಪ್  ಆಗಿದ್ದಾರೆ.

ರಿಪ್ಪನ್ ಪೇಟೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗವಟೂರು ಹೊಳೆಯಲ್ಲಿ ಮರಳು ಮಾಫಿಯಾದವರು ಮರಳು ಸಂಗ್ರಹ ಮಾಡುತ್ತಿರುವ ವಿಷಯ ಕಂದಾಯ,ಅರಣ್ಯ, ಪೊಲೀಸ್,ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರಿಗೆ ಗೊತ್ತಿದ್ದರೂ ಸಹ ಕಣ್ಣುಮುಚ್ಚಿ ಕುಳಿತುಕೊಂಡಿದ್ದರು. ಪ್ರತಿ ದಿನ ಲಕ್ಷಾಂತರ ರೂಪಾಯಿಗಳ ಮರಳು ಈ ಹೊಳೆಯ ದಡದಿಂದ ಸಾಗಾಣಿಕೆ ಆಗುತ್ತಿತ್ತು. ಹಾಗೆಯೇ ಕೆಲವು ಅಧಿಕಾರಿಗಳಿಗೆ ಸಂಭಾವನೆಯೂ ದೊರೆಯುತ್ತಿತ್ತು. ಮರಳು ಮಾಫಿಯಾದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು ಸಹ ಅವರುಗಳು ಯಾವುದೇ ಕ್ರಮವನ್ನೂ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತುಕೊಂಡಿದ್ದರು.


ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ಪೋಸ್ಟ್ ಮ್ಯಾನ್  ಭಾನುವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದನ್ನು ಅರಿತ ಮರಳು ಮಾಫಿಯಾದವರು  ಗವಟೂರು ಹೊಳೆಯ ದಡದಿಂದ ಎಸ್ಕೇಪ್ ಆಗಲೂ ಕೆಲವು ಅಧಿಕಾರಿಗಳು, ರಾಜಕಾರಣಿಗಳು, ಸಹಕಾರ ನೀಡಿದ್ದಾರೆ.

ಈ ಬಗ್ಗೆ ವರದಿ ಮಾಡದೇ ಇರಲು ಹಣದ ಆಮಿಷವು ಪೋಸ್ಟ್ ಮ್ಯಾನ್ ನ್ಯೂಸ್ ತಂಡಕ್ಕೆ ಬಂದಿದ್ದು ಅದನ್ನು ನಯವಾಗಿ ತಿರಸ್ಕರಿಸಲಾಗಿತ್ತು.


ಡೀಲ್ ಮಗಾ ಡೀಲ್ : ಕಳೆದ ಕೆಲವು ವಾರಗಳಿಂದ ಸದ್ದಿಲ್ಲದೆ ಗವ ಟೂರು ಹೊಳೆಯ ದಡದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾದವರಿಗೆ ಕೆಲವು ಅಧಿಕಾರಿಗಳು, ರಾಜಕಾರಣಿಗಳು ಸಾಥ್ ನೀಡುವ ಮೂಲಕ ಡೀಲ್  ಮಗ ಡೀಲ್  ನಲ್ಲಿ ತೊಡಗಿದ್ದರು.





ಸಂಪಾದಕೀಯ :

ಉತ್ತಮ ವರದಿಗಾರಿಕೆಯ ಕನಸಿನಲ್ಲಿ ಹೆಜ್ಜೆ ಇಟ್ಟಿರುವೆ,~ ಸಾಧ್ಯವಾಗದಿದ್ದಲಿ ಈ ಕ್ಷೇತ್ರವೇ ಬಿಡುವೆ ಹೊರತು ವರದಿಗಾರಿಕೆಯಲ್ಲಿ ಹಾದರ ಮಾಡುವುದಿಲ್ಲ.

By ರಫ಼ಿ ರಿಪ್ಪನ್ ಪೇಟೆ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ ಲೈಂಗಿಕ ದೌರ್ಜನ್ಯ, ಗರ್ಭಿಣಿ! ಆರೋಪಿಯ ಬಂಧನ

ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…

1 hour ago

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…

5 hours ago

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…

7 hours ago

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು Young woman Archana Jain dies…

7 hours ago

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

24 hours ago

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ Ripponpete's Apeksha K. secured second place and runner-up…

1 day ago