ತುಂಗಾ ನದಿಯಲ್ಲಿ ತೇಲುತ್ತಿದ್ದ ಅರ್ಧಂಬರ್ಧ ಸುಟ್ಟ ಶವ : ಹಲವು ಅನುಮಾನಕ್ಕೆ ಎಡೆ

ಶಿವಮೊಗ್ಗದ ತುಂಗನದಿಯಲ್ಲಿ ಅರ್ಧಂಬರ್ಧ ಸುಟ್ಟ ಶವವೊಂದು ದೊರೆತಿದೆ. ಇಷ್ಟುದಿನ‌ ಗಂಗಾನದಿಯಲ್ಲಿ ಇಂತಹ ಅರ್ದಂಬರ್ಧ ಸುಟ್ಟ ಹೆಣ ದೊರೆಯುವ ದೃಶ್ಯಾವಳಿಗಳು ಕಂಡುಬರುತ್ತಿದ್ದವು ಆದರೆ ತುಂಗ ನದಿಯಲ್ಲಿ ಈ ಶವ ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಂದು ಸಂಜೆ 6 ಗಂಟೆಯ ವೇಳೆಗೆ ರೋಟರಿ ಚಿತಾಗಾರದಿಂದ ತುಂಗಾನದಿಗೆ ಹೋಗುವ ಜಾಗದಲ್ಲಿ ಈ ಶವ ಪತ್ತೆಯಾಗಿದೆ. ಈ ಶವ ಸೊಂಟದ ಕೆಳಭಾಗ ಪೂರ್ತಿ ಸುಟ್ಟು ಹೋಗಿದೆ. ಆದರೆ ಇದು ಗಂಡೋ ಹೆಣ್ಣೋ ಎಂಬುದು ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬರಬೇಕಿದೆ. ಜೊತೆಗೆ ಯಾವ ಕಾರಣಕ್ಕೆ ಈ ಶವ ಅರ್ಧಂಬರ್ಧ ಸುಡಲಾಗಿದೆ ಎಂಬುದು ತಿಳಿದು ಬರುತ್ತಿದೆ.‌

ಈ ಶವ ರೋಟರಿ ಚಿತಾಗಾರರ ಸಿಬ್ಬಂದಿಗಳ ಮೇಲೆ ಹೆಚ್ಚಿನ ಅನುಮಾನ ಹುಟ್ಟಿಸಿದೆ. ಆದರೆ ಇಲ್ಲಿನ ಸಿಬ್ಬಂದಿಗಳು ಈ ಅರೊಪವನ್ನ ತಳ್ಳಿಹಾಕಿದ್ದಾರೆ. ಈ ರೀತಿ ನಾವು ಸುಡುವುದಿಲ್ಲವೆಂದು ಹೇಳುತ್ತಾರೆ. ಗ್ಯಾಸ್ ಬರ್ನಿಂಗ್ ನ್ನ ಇಂದು ಆರಂಬಿಸಿಯೇ ಇಲ್ಲವೆನ್ನುತ್ತಾರೆ ಸಿಬ್ಬಂದಿಗಳು. ಸ್ಥಳಕ್ಕೆ ಕೋಟೆ ಪೊಲೀಸರು ಭೇಟಿ ನೀಡಿದ್ದಾರೆ. ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಯಾರಾದರೂ ಕೊಲೆ ಮಾಡಿ ಹೀಗೆ ಅರ್ಧಂಬರ್ಧ ಸುಟ್ಟು ಹೋಗಿದ್ದಾರಾ ಎಂಬ ಬಗ್ಗೆನೂ ತನಿಖೆ ನಡೆಯಬೇಕಿದೆ. ಆದರೆ ಬಹುತೇಕ ಅನುಮಾನ ಹುಟ್ಟುತ್ತಿರುವುದು ಚಿತಾಗಾರದ ಮೇಲೆನೇ. ಅದು ಸಹ ಈ ಚಿತಾಗಾರದಲ್ಲಿ ಗ್ಯಾಸ್ ಬರ್ನಿಂಗ್ ನಲ್ಲಿ ಅರ್ಧಂಬರ್ಧ ಸುಟ್ಟು ನದಿಗೆ ಹಾಕಿರಬಹುದೆಂದು ಶಂಕಿಸಲಾಗಿದೆ.

ಕಾರಣ ಇಷ್ಟೇ ಗ್ಯಾಸ್ ಬರ್ನಿಂಗ್ ನಲ್ಲಿ ಮೇಲ್ಭಾಗದಲ್ಲಿ ಮತ್ತು‌ ಕೆಳಭಾಗದಲ್ಲಿ ಎರಡು ಬರ್ನರ್ ಗಳಿವೆ. ಏಕಕಾಲದಲ್ಲಿ ಬರ್ನರ್ ಆನ್ ಮಾಡಿದರೆ ಶವ ಪೂರ್ತಿ ಸುಟ್ಟುಹೋಗಲಿದೆ. ಆದರೆ ಕೆಳಭಾಗದ ಶವದ ಬರ್ನಿಂಗ್ ಆನ್ ಮಾಡಿ ಮೇಲಿನ ಬರ್ನಿಂಗ್ ಆನ್ ಮಾಡದಿದ್ದರೆ‌ ಈ ರೀತಿ ಶವ ಅರ್ಧಂಬರ್ಧ ಸುಟ್ಟುಹೋಗುವ ಸಂಭವನೀಯತೆ ಹೆಚ್ಚು.

ಈ ಹಿನ್ನಲೆಯಲ್ಲಿ ನಾಳೆ ಈ ಶವಗಾರದ ಸಿಬ್ಬಂದಿಗಳನ್ನ ಕೋಟೆ ಠಾಣೆಗೆ ಕರೆಯಲಾಗಿದೆ.‌ಅರ್ಧಂಬರ್ಧ ಪತ್ತೆಯಾದ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

4 hours ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

21 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

21 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

21 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

1 day ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

1 day ago