ಮಹಿಳೆಯಿಂದ ಲಕ್ಷಾಂತರ ರೂ ಹಣ ಪಡೆದು ಹಣ ವಾಪಾಸ್ ಕೊಡದೆ ಸತಾಯಿಸುತ್ತಿದ್ದವನು ಹಣ ವಾಪಾಸ್ ಪಡೆಯಲು ಬಂದ ಮಹಿಳೆಯ ವಿರುದ್ಧ ಬೇರೆಯವರ ಜೊತೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದರ ಪರಿಣಾಮ ಬೇಸತ್ತ ಮಹಿಳೆ ಇಬ್ಬರು ಮಕ್ಕಳೊಂದಿಗೆ ಭದ್ರಾ ಚಾನೆಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ.
ಸಂತೋಷ್ ಅರಹತೊಳಲು ಎಂಬಾತನು ಈ ಹಿಂದೆ ಯಡೇಹಳ್ಳಿ ವೀಣಾ (32) ಎಂಬುವರಿಂದ 8 ಲಕ್ಷ ರೂ.ಹಣ ಸಾಲವಾಗಿ ಪಡೆದಿದ್ದನು. ಹಣ ವಾಪಾಸ್ ಕೇಳಲು ಹೋದ ಸಂತೋಷ್ ಅರಹತೊಳಲು ಹಾಗೂ ಆಶಾ ಎಂಬುವರು ಸೇರಿ ವೀಣಾರಿಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದಾರೆ.
ಇಬ್ಬರ ಮಾತಿಗೆ ಮಾನಸಿಕವಾಗಿ ಕುಗ್ಗಿಹೋದ ವೀಣ ಈ ಬಗ್ಗೆ ಮನನೊಂದಿದ್ದರು. ಜ.13 ರಂದು ಸಂಕ್ರಾತಿ ಹಬ್ಬಕ್ಕೆ ಹೊಳಲೂರಿನಲ್ಲಿರುವ ತವರು ಮನೆಗೆ ಮಕ್ಕಳೊಂದಿಗೆ ಹೋಗುವುದಾಗಿ ಹೇಳಿ ಹಂಚಿನ ಸಿದ್ದಾಪುರದ ಬಳಿ 7 ವರ್ಷ ಮತ್ತು ಒಂದು ವರ್ಷದ ಹೆಣ್ಣುಮಕ್ಕಳೊಂದಿಗೆ ಭದ್ರಾ ಚಾನೆಲ್ ಗೆ ಹಾರಿದ್ದಾರೆ.
ವೀಣಾಳ ಮೃತ ದೇಹವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯ ಹತ್ತಿರ ದೊರೆತಿದೆ. 7 ವರ್ಷದ ಮಗಳ ಮೃತದೇಹವು ಚನ್ನಗಿರಿಯ ನಲ್ಲೂರಿನ ಬಳಿ ಪತ್ತೆಯಾಗಿದೆ. ಎರಡೂ ಮೃತದೇಹವು ಭದ್ರಾ ಚಾನೆಲ್ ನಲ್ಲಿ ದೊರೆತಿದೆ. ಒಂದು ವರ್ಷದ ಮಗುವಿನ ಮೃತದೇಹದ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. ಮೃತ ವೀಣಾರವರ ಪತಿ ಸಂತೋಷ್ ರವರ ಹೇಳಿಕೆ ಮೇಲೆ ದೂರು ದಾಖಲಿಸಿಕೊಂಡಿರುವ ಹೊಳೆಹೊನ್ನೂರು ಪೊಲೀಸರು ಅಪಪ್ರಚಾರ ಮಾಡಿರುವ ಸಂತೋಷ್ ಅರಹತೊಳಲು ಇವರನ್ನ ಬಂಧಿಸಿದ್ದಾರೆ.
ಸಾಯುವ ವೇಳೆ ವೀಣಾರವರು ಡೆತ್ ನೋಟ್ ಬರೆದಿಟ್ಟಿದ್ದು ನನ್ನ ಸಾವಿಗೆ ಸಂತೋಷ್ ಅರಹತೊಳಲು ಅವರ ಅಪಪ್ರಚಾರ, ಮಾನಸಿಕ ಕಿರುಕುಳದಿಂದ ಬೇಸತ್ತು ಸಾವನ್ನಪ್ಪುತ್ತಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬರದಿಟ್ಟಿದ್ದಾರೆ. ಒಟ್ಟಿನಲ್ಲಿ ಅಪಪ್ರಚಾರಕ್ಕೆ ಮೂರು ಜೀವ ಬಲಿಯಾಗಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್