ಸಾಗರ ತಾಲ್ಲೂಕು ಬಾರಂಗಿ ಹೋಬಳಿ ವ್ಯಾಪ್ತಿಯ ಅರಳಗೋಡು ಗ್ರಾಮ ಪಂಚಾಯತ್ನ ಮಂಡವಳ್ಳಿ ಗ್ರಾಮದ 9 ಮನೆಗಳ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಘಟನೆಯ ವಿವರ
ಮಂಡವಳ್ಳಿ ಗ್ರಾಮದ ಆಚೆಕೊಪ್ಪದಲ್ಲಿ ಸಿಂಗಲ್ ಫೇಸ್ ಲೈನ್ ಮೊದಲಿನಿಂದಲೂ ಇದೆ. ಈ ಲೈನ್ ಹಾದು ಹೋಗಿರುವ ಕಂಬದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ತ್ರಿ ಫೇಸ್ ಲೈನ್ ಕೂಡ ಅಳವಡಿಸಲಾಗಿದ್ದುಇದು ಅಪಾಯಕಾರಿಯಾಗಿದ್ದರಿಂದ ಗ್ರಾಮಸ್ಥರು ಪಂಚಾಯಿತಿ ಮೂಲಕ ಮೆಸ್ಕಾಂ ಅಧಿಕಾರಿಗಳಿಗೆ ದುರಸ್ಥಿ ಮಾಡಿಕೊಡುವಂತೆ ಮನವಿ ಮಾಡಿರುತ್ತಾರೆ.
ಒಂದಕ್ಕೊಂದು ತಾಗುವಂತೆ ಲೈನ್ ಹೋಗಿದ್ದು ಏನಾದರೂ ಹೆಚ್ಚು ಕಮ್ಮಿಯಾದರೆ, ಸಾವು ನೋವು ಆಗಬಹುದು, ಹಾಗಾಗಿ ಇದನ್ನು ಕೂಡಲೇ ಸರಿ ಮಾಡ್ಬೇಕು ಅಂತಾ ಮನವಿ ಕೊಟ್ಟಿದ್ದರೂ ಸಹ
ಪಂಚಾಯಿತಿ ಮನವಿ ಆಧರಿಸಿ, ಆಚೆಕೊಪ್ಪದಲ್ಲಿ ಬೇರೆಬೇರೆ ಫೇಸ್ ಲೈನ್ ಹೋಗಿದ್ದ ಕಂಬವನ್ನ ಬದಲಾಯಿಸಿ ಪುನಃ ಕನೆಕ್ಷನ್ ನೀಡಿದ್ದಾರೆ. ಆದರೆ ಹೀಗೆ ಕನೆಕ್ಷನ್ ನೀಡುವಾಗ ವ್ಯತ್ಯಾಸವಾಗಿದ್ದು ಇದರಿಂದಾಗಿ ಹೆಚ್ಚಿನ ಕರೆಂಟ್ ಹರಿದು ಸಿಂಗಲ್ ಫೇಸ್ ಲೈನ್ ಹೊಂದಿದ್ದ 9 ಮನೆಗಳ ಸ್ವಿಚ್ ಬೋರ್ಡ್ ಸುಟ್ಟು ಹೋಗಿವೆ.4ಮನೆ ಟಿವಿ ಹೋಗಿದ್ದು ಒಬ್ಬರ ಮನೆಯ ವಾಷಿಂಗ್ ಮಷಿನ್ ಸೇರಿದಂತೆ ಎಲ್ಲರ ಮನೆಯ ಮಿಕ್ಸಿಗಳು ಸಹ ಹಾಳಾಗಿವೆ. ಮಂಗಳವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಗ್ರಾಮಸ್ಥರ ಹೇಳಿಕೆಯ ಪ್ರಕಾರ ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನದಿಂದ ನಮ್ಮ ಗ್ರಾಮದ 9ಜನರ ಮನೆಯ ವೈರಿಂಗ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಮನೆಯಲ್ಲಿದ್ದಂತಹ ಎಲ್ಲಾ ಯಂತ್ರೋಪಕರಣಗಳು ಸಹ ಭಸ್ಮವಾಗಿವೆ ಹೀಗಾಗಿ ಮೆಸ್ಕಾಂ ಇಲಾಖೆಯವರು ನಮಗೆ ಪರಿಹಾರವನ್ನು ನೀಡಲೇಬೇಕು ಈ ಬಗ್ಗೆ ಶಾಸಕರ ಗಮನಕ್ಕೂ ತರುತ್ತೇವೆ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಸನತ್ ರವರು ಮಾಹಿತಿ ನೀಡಿದ್ದಾರೆ.
ವರದಿ: ಪವನ್ ಕುಮಾರ್ ಕಠಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್