Headlines

ರಿಪ್ಪನ್‌ಪೇಟೆ: ಪ್ರೀತಿಯನ್ನು ಶಂಕಿಸಿ ಯುವತಿಯನ್ನು ಕೊಲೆಗೈದು ವಿಷ ಸೇವಿಸಿದ್ದ ಭಗ್ನ ಪ್ರೇಮಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು!

ರಿಪ್ಪನ್‌ಪೇಟೆ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ ತಾಲೂಕಿನ ಜೋಗ ಸಮೀಪದ ಕಾನೂರು ಗ್ರಾಮದ ಯುವತಿ ಕವಿತಾ (21) ಎಂಬಾಕೆಯನ್ನು ರಿಪ್ಪನ್‌ಪೇಟೆಯಲ್ಲಿ ಪಿಯುಸಿ ಓದುತ್ತಿರುವಾಗ ಪರಿಚಯ ಮಾಡಿಕೊಂಡು ಕಳೆದ ಐದಾರು ವರ್ಷದಿಂದ ಪ್ರೀತಿಸಿ ನಂತರ ಆಕೆ ಮೋಸ ಮಾಡಿ ಬೇರೊಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದಾಳೆಂಬ ಕಾರಣಕ್ಕೆ ತನ್ನ ಊರಿಗೆ ಕರೆಯಿಸಿಕೊಂಡು ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ತಾನು ಕಳೆನಾಶಕ ಕುಡಿದು ಆಸ್ಪತ್ರೆ ಸೇರಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಘಟನೆ ಹಿನ್ನಲೆ:

ಕಳೆದ ಐದಾರು ವರ್ಷದ ಹಿಂದೆ ರಿಪ್ಪನ್‌ಪೇಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕಗ್ಗಲಿ ಗ್ರಾಮದ ಶಿವಮೂರ್ತಿ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು.ಶಿವಮೊಗ್ಗದಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಬೇರೆ ಹುಡುಗನ ಜೊತೆ ಪ್ರೀತಿ ಚಿಗುರಿದೆ ಎಂದು ಶಂಕಿಸಿ,ಶಿವಮೊಗ್ಗದಿಂದ ಬೆಳ್ಳೂರು ವ್ಯಾಪ್ತಿಯ ಕಗ್ಗಲಿ ಕಾಡಿಗೆ ಕರೆದುಕೊಂಡು ಹೋಗಿ ಪ್ರೀತಿಸುವಂತೆ ಒತ್ತಾಯಿಸಿದ್ದು, ಪ್ರೀತಿ ನಿರಾಕರಿಸಿದ್ದರಿಂದ ಕುಪಿತಗೊಂಡು ಅವಳ ಕುತ್ತಿಗೆಗೆ ಚೂಡಿದಾರ್ ವೇಲ್ ನಿಂದ ಸುತ್ತಿ ಕೊಲೆ ಮಾಡಿ ತಾನು ಸಹ  ಕಳೆನಾಶಕ ಔಷಧಿ ಕುಡಿದು ಮನೆಗೆ ಬಂದು ಹುಡುಗಿಯನ್ನು ಹತ್ಯೆಗೈದಿರುವ ಬಗ್ಗೆ ಮಾಹಿತಿ ನೀಡಿ ಅಸ್ವಸ್ತನಾಗಿದ್ದ ನಂತರ ಕುಟುಂಬದವರು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದರು.

ಆ.25 ರಂದು ಯುವತಿ ಕಾಣೆಯಾಗಿರುವ ಬಗ್ಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು. ನಂತರ ನಿನ್ನೆ ಯುವತಿಯ ತಂದೆ ದಾನಪ್ಪ ತನ್ನ ಮಗಳನ್ನು ಆಕೆಯ ಸ್ನೇಹಿತ ತಳಲೆ ಗ್ರಾಮದ ಶಿವುಮೂರ್ತಿ (23) ಇವನು ಕೊಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಭಗ್ನ ಪ್ರೇಮಿ ಶಿವುಮೂರ್ತಿ (23), ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 11 ಗಂಟೆಯ ಸಮಯದಲ್ಲಿ ಆತನು ಸಾವನ್ನಪ್ಪಿರುವುದು ತಿಳಿದುಬಂದಿದೆ.



ವರದಿ : ರಾಮನಾಥ್




ನಿರಂತರ ಸ್ಥಳೀಯ ಸುದ್ದಿಯನ್ನು ಪಡೆಯಲು ಪೋಸ್ಟ್ ಮ್ಯಾನ್ ಫೇಸ್‌ಬುಕ್‌ ಪೇಜ್ ನ್ನು ಲೈಕ್ ಮಾಡಿ.

Leave a Reply

Your email address will not be published. Required fields are marked *

Exit mobile version