Headlines

ಹೆಣ್ಣು ಮಕ್ಕಳು ಮನೆಯಲ್ಲೆ ಇರಿ ಎನ್ನಲು ಪೊಲೀಸ್ ವ್ಯವಸ್ಥೆ ಬೇಕಾ : ಕಿಮ್ಮನೆ ರತ್ನಾಕರ್:

ತೀರ್ಥಹಳ್ಳಿ : ಆರಗ‌ ಜ್ಞಾನೇಂದ್ರ ರವರ ಹೇಳಿಕೆಯಿಂದ ತೀರ್ಥಹಳ್ಳಿಯ ಘನೆತೆಗೆ ಕುಂದು ಬರುತ್ತಿದೆ. ಅವರು ಪ್ರಭುದ್ಧತೆಯಿಂದ ಹೇಳಿಕೆಗಳನ್ನು ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ‌ ಜ್ಞಾನೇಂದ್ರ ಅವರ ಹೇಳಿಕೆಯಿಂದ ಗೃಹ ಸಚಿವ ಸ್ಥಾನಕ್ಕೆ ಅರ್ಹರಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್​ನವರನ್ನು ಗುರಿಯಾಗಿಟ್ಟುಕೊಂಡು ಹೇಳಿಕೆಗಳನ್ನು ನೀಡಬಾರದು. ರಾಜ್ಯದ 6 ಕೋಟಿ ಜನರನ್ನು ನೋಡಿಕೊಂಡು ಹೇಳಿಕೆಗಳನ್ನು ನೀಡಬೇಕು. ಅಧಿಕಾರದಲ್ಲಿದ್ದಾಗ ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಕಾಂಗ್ರೆಸ್​ನವರು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಆರಗ ಜ್ಞಾನೇಂದ್ರ ಮೇಲೆಯೇ ಕೋಮುಗಲಭೆಯ 5 ಕೇಸ್​ಗಳಿವೆ. ಕ್ರಿಮಿನಲ್ ಕೇಸ್​ಗಳಿರುವ ಅವರು, ಅಪರಾಧಿ. ಅತ್ಯಾಚಾರಕ್ಕೂ, ಕಾಂಗ್ರೆಸ್​ಗೂ ಏನು ಸಂಬಂಧವಿದೆ. ಅನಾವಶ್ಯಕವಾಗಿ ಹೇಳಿಕೆ ನೀಡಿ, ಅವರೇ ಮೈಮೇಲೆ ಎಳೆದುಕೊಂಡಿದ್ದಾರೆ. ಬಾಲಿಶ ಹೇಳಿಕೆಗಳನ್ನು ನೀಡಬಾರದು. ಬಂಗಾರದ ಅಂಗಡಿಗಳನ್ನು ಹಗಲು ಹೊತ್ತಿನಲ್ಲಿ ತೆರೆದಿರುತ್ತಾರೆ. ಹಗಲಿನಲ್ಲೇ ದರೋಡೆ ನಡೆಯುತ್ತೆ. ಹಾಗಂತ ಹಗಲು ಚಿನ್ನದಂಗಡಿ ಬಾಗಿಲು ತೆರೆಯಬಾರದಾ?. ಬಾಗಿಲು ಹಾಕಿಕೊಂಡೇ ಇರಿ ಎನ್ನಲು ಪೊಲೀಸ್ ವ್ಯವಸ್ಥೆ ಬೇಕಾ?. ಹೆಣ್ಣುಮಕ್ಕಳು ಮನೆಯಲ್ಲೇ ಇರಿ ಎನ್ನಲು ಪೊಲೀಸ್ ವ್ಯವಸ್ಥೆ ಬೇಕಾ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

Exit mobile version