Categories: Blog

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್….! ಯುವತಿ ಪರ ವಾದಮಂಡನೆಗೆ ಮುಂದಾದ ಪದ್ಮಶ್ರೀಪುರಸ್ಕೃತ ಇಂದಿರಾ ಜೈಸಿಂಗ್

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಬಿಜೆಪಿ ತಲೆ ತಗ್ಗಿಸುವಂತೆ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಶ್ಲೀಲ ಸಿಡಿ ಪ್ರಕರಣದ ಸಂತ್ರಸ್ಥೆ ಯುವತಿ ಪರ ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ಹಕ್ಕು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಕಣಕ್ಕಿಳಿದಿದ್ದು, ರಮೇಶ್ ಜಾರಕಿಹೊಳಿ ಎದೆಯಲ್ಲಿ ನಡುಕ ಆರಂಭವಾಗಿದೆ.
ಇತ್ತೀಚಿಗಷ್ಟೇ ಪ್ರಕರಣದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ  ಸಂತ್ರಸ್ಥ ಯುವತಿ ಎಸ್ಐಟಿ ತನಿಖೆಯಲ್ಲಿ ನನಗೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟ್ ರಮೇಶ್ ಜಾರಕಿಹೊಳಿ ಹಾಗೂ ಎಸ್ಐಟಿಗೆ ನೊಟೀಸ್ ಜಾರಿ ಮಾಡಿತ್ತು.
ಇದರ ಬೆನ್ನಲ್ಲೇ ಯುವತಿ ಪರ ವಾದ ಮಂಡಿಸಲು ಪದ್ಮಶ್ರೀ ಪುರಸ್ಕೃತ ಮಾನವ ಹಕ್ಕುಹೋರಾಟಗಾರ್ತಿ, ವಕೀಲೆ ಹಾಗೂ ಅಡಿಷನ್ ಸಾಲಿಟರ್ ಜನರಲ್ ಹುದ್ದೆ ಅಲಂಕರಿಸಿದ ಮೊದಲ ಮಹಿಳಾ ವಕೀಲೆ ಎಂಬ ಖ್ಯಾತಿಯ ಇಂದಿರಾ ಜೈಸಿಂಗ್  ಹೈಕೋರ್ಟ್ ನಲ್ಲಿ ಯುವತಿ ಪರ ವಾದ ಮಂಡಿಸಲು ಅನುಮತಿ ಕೋರಿದ್ದಾರೆ.
ಲಿಂಗ ಅಸಮಾನತೆ ಸೇರಿದಂತೆ ಹಲವು ಹೋರಾಟಗಳ ಮೂಲಕವೇ ಮುನ್ನಲೆಗೆ ಬಂದ ಇಂದಿರಾ ಜೈಸಿಂಗ್ ಎಂಟ್ರಿಯಿಂದ ಅಶ್ಲೀಲ ಸಿಡಿ ಪ್ರಕರಣದ ತನಿಖೆ ಹಾಗೂ ರಮೇಶ್ ಜಾರಕಿಹೊಳಿ ಭವಿಷ್ಯ ಎರಡಕ್ಕೂ ಸಾಕಷ್ಟು ಸವಾಲುಗಳು ಕಾದಿವೆ ಎಂದು ಕಾನೂನು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
81 ವರ್ಷದ ಇಂದಿರಾ ಜೈಸಿಂಗ್ ಮುಂಬೈನ ಸಿಂಧಿ ಕುಟುಂಬದಲ್ಲಿ ಜನಿಸಿದ್ದು, 1962 ರಲ್ಲಿ ಬೆಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಮಾನವ ಹಕ್ಕು ಹೋರಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂದಿರಾ ಜೈಸಿಂಗ್  ಎಸ್ಐಟಿ ತನಿಖೆ ಪ್ರಶ್ನಿಸಿ ಯುವತಿ ಸಲ್ಲಿಸಿರುವ ಅರ್ಜಿ ಹಾಗೂ ಪಿಐಎಲ್ ಅರ್ಜಿ ಪರ ವಾದ ಮಂಡಿಸಲಿದ್ದಾರೆ.
ಮೊದಲ ವಾದ ಮಂಡನೆಯಲ್ಲೇ ಎಸ್ಐಟಿಗೆ ತಿರುಗೇಟು ನೀಡಿರುವ ಇಂದಿರಾ ಜೈಸಿಂಗ್ ಹೈಕೋರ್ಟ್ ಅನುಮತಿ ಇಲ್ಲದೇ ಪ್ರಕರಣದ ತನಿಖೆ ಮುಗಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಸರ್ಕಾರಿ ಪರ ವಕೀಲರು ತನಿಖೆ ಮುಗಿದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಯುವತಿ ಸಿಬಿಐ ತನಿಖೆಗೆ ಆಗ್ರಹಿಸಿರೋ ಅರ್ಜಿಗೆ ರಮೇಶ್ ಜಾರಕಿಹೊಳಿ ಪರ ವಕೀಲ ಸಿ.ವಿ.ನಾಗೇಶ್ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅಶ್ಲೀಲ ಸಿಡಿ ಪ್ರಕರಣದಲ್ಲಿ ಇಂದಿರಾ ಜೈಸಿಂಗ್ ರಂತಹ ಹೆಸರಾಂತ ವಕೀಲರು ವಾದ ಮಂಡಿಸಲು ಮುಂದಾಗಿರುವುದು ಪ್ರಕರಣಕ್ಕೆ ಹಲವು ಆಯಾಮ ನೀಡಿದ್ದು, ಬೇರ್ಯಾವುದೋ ಅದೃಶ್ಯ ಶಕ್ತಿ ಸಂತ್ರಸ್ಥ ಯುವತಿಯ ಬೆಂಬಲಕ್ಕೆ ನಿಂತಿದ್ಯಾ? ಈ ಪ್ರಕರಣದಲ್ಲಿ ರಾಜಕೀಯ ಲೆಕ್ಕಾಚಾರಗಳು ಸೇರಿಕೊಂಡಿದ್ಯಾ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಬರುವೆ ಶಾಲೆಯ ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ Teacher Ambika…

9 hours ago

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…

10 hours ago

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…

10 hours ago

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…

12 hours ago

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ – 9ನೇ ತರಗತಿ ವಿದ್ಯಾರ್ಥಿನಿ ಸಾವು

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…

13 hours ago

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು Shivamogga police have registered…

13 hours ago