
ಹಳೆ ವಾಹನ ಇಟ್ಟುಕೊಂಡಿದ್ದೀರಾ? ಈ ಸುದ್ದಿ ಓದಿ – ಇಲ್ಲದಿದ್ದರೆ ನಿಮ್ಮ ಗಾಡಿ ಗುಜರಿ ಸೇರುವುದು ಗ್ಯಾರಂಟಿ! | Own an Old Vehicle? Read This or Scrap Is Guaranteed
ನಿಮ್ಮ ಬಳಿ ಹಳೆಯ ವಾಹನಗಳಿವೆಯೇ? ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಕಚೇರಿಗೆ ಅಲೆದಾಡದೆ, ವಾಹನವನ್ನು ತೋರಿಸದೇ ಏಜೆಂಟರಿಗೆ ಹಣ ನೀಡಿ ಪ್ರಮಾಣಪತ್ರ ಮಾಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಈ ಹೊಸ ನಿಯಮಗಳು ನಿಮಗೆ ನಿಜಕ್ಕೂ ಆಘಾತ ತರುವಂತವು. ವಾಹನಗಳ ಫಿಟ್ನೆಸ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಯಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಕ್ರಮಗಳಿಂದ ನಿರ್ವಹಣೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಶಾಶ್ವತ ಬೀಗ ಜಡಿಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ…


