
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸರ್ವರ್ ದೋಷ – ಗ್ರಾಹಕರ ಆಕ್ರೋಶ
ರಿಪ್ಪನ್‌ಪೇಟೆ : ಹೊಸನಗರ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳ ಮುಂದೆ ಜನಸ್ತೋಮ ಪಡಿತರಕ್ಕಾಗಿ ನಿಂತು ಹೈರಾಣಾಗಿದೆ.ಶುಕ್ರವಾರದಿಂದ ಪಡಿತರ ವಿತರಣೆ ಮಾಡುತ್ತಿದ್ದರೂ, ಎಲ್ಲಾ ಗ್ರಾಹಕರಿಗೆ ಪಡಿತರ ತಲುಪಿಸಲು ಸಾಧ್ಯವಾಗಿಲ್ಲ… ಇದರಿಂದಾಗಿ ಸಾರ್ವಜನಿಕರು ಸಂಬಂಧಿಸಿದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಇದಕ್ಕೆಲ್ಲ ಕಾರಣವಾಗಿದ್ದು ಗ್ರಾಹಕರ ಬೆರಳಚ್ಚು (ಬಯೋಮೆಟ್ರಿಕ್) ಪಡೆಯುವ ಸರ್ವರ್ ಗಳ ದೋಷ , ಇದರಿಂದಾಗಿ ಜನರ ನರಳಾಟ…. ಸರ್ವರ್ ವೈಫಲ್ಯದಿಂದಾಗಿ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ… ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಪುರುಷೋತ್ತಮ್ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಪಡಿತರಕ್ಕಾಗಿ ದೂರದ ಹಳ್ಳಿಗಳಿಂದ…


