January 11, 2026

ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ

ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ

ದೂನ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ರಿಪ್ಪನ್‌ಪೇಟೆ : ಕನ್ನಡ ನಾಡು ನುಡಿ ಜಲ ಸಂಸ್ಕ್ರತಿಯನ್ನು ನಾಡಿನ ಪ್ರತಿಯೊಬ್ಬರು ಪ್ರೀತಿಸಿ ಬೆಳೆಸಿದಾಗ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳುತ್ತದೆ. ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

ಇಂದು ಅರಸಾಳು ಗ್ರಾಪಂ ವ್ಯಾಪ್ತಿಯ ದೂನ ಗ್ರಾಮದ ವೃತ್ತದಲ್ಲಿ ಮಲೆನಾಡ ಕನ್ನಡಿಗರ ಸೇನೆ ಆಯೋಜಿಸಿದ್ದ 69ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗರು ನಾಡು ನುಡಿ ಜಲ ಭಾಷೆಯ ರಕ್ಷಣೆಗೆ ಮುಂದಾಗಬೇಕು ಹಾಗೇಯೆ ಗೌರವಿಸಬೇಕು,ಭಾಷೆಗೆ ಗೌರವವನ್ನು ನೀಡಿದಾಗ ಅದು ಜನ ಸಮೂಹದಲ್ಲಿ ವೇಗವಾಗಿ ತನ್ನ ಭಾಷಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ರಾಜ್ಯ ಭಾಷೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸುತ್ತದೆ ಎಂದರು.

ಮಲೆನಾಡ ಕನ್ನಡಿಗರ ಸೇನೆ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂಧರ್ಭದಲ್ಲಿ ಅರಸಾಳು ಗ್ರಾಪಂ ಅಧ್ಯಕ್ಷೆ ಜಯಮ್ಮ ನಾಗಪ್ಪ , ಸೋಮಶೇಖರ್ (ದೂನ ರಾಜು) ,ನಂದೀಶ ಡಿ ಎಸ್  , ನಾಗಪ್ಪ ಉಂಡುಗೋಡು, ಚಂದ್ರಮ್ಮ , ಬಾಲು ದೂನ , ಸಿದ್ದೇಶ್ ಭಂಡಾರಿ , ರಾಯಲ್ ಚಿರು , ಸಿದ್ದು ಡಿ ಎಸ್ , ರುಧ್ರಪ್ಪ ಡಿ ಎಂ , ಗಣೇಶ್ ಡಿ ಎನ್ , ಗುರು ಸೋಮಶೇಖರ್ , ಗಣೇಶ್ ಡಿ ಎನ್ , ಆನಂದ್ ಡಿ ಎಂ ಹಾಗೂ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *

Exit mobile version