Headlines

RIPPONPETE | ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

RIPPONPETE | ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ ರಿಪ್ಪನ್ ಪೇಟೆ : ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿರುವ ಮೂಲಕ ಸೌಹಾರ್ಧತೆ ಮೆರೆದಿರುವ ಘಟನೆ ನಡೆದಿದೆ. ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (‌ತನ್ವಿ ಮೊಬೈಲ್ ವರ್ಲ್ಡ್)‌ ಅಂಗಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ…

Read More

RIPPONPETE |ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ನಿರ್ಲಕ್ಷ್ಯ – ಕನ್ನಡಪರ ಹೋರಾಟಗಾರರ ಆಕ್ರೋಶ

ರಿಪ್ಪನ್‌ಪೇಟೆ : ನಾಡಿನಾದ್ಯಂತ ದೀಪಾವಳಿ ಹಬ್ಬದ ನಡುವೆಯೂ ಸಡಗರ ಹಾಗೂ ಸಂಭ್ರದಿಂದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತಿದ್ದು ಅದಕ್ಕೆ ತದ್ವಿರುದ್ಧ ಎಂಬುವಂತೆ ಪ್ರಾಂಶುಪಾಲರ ನಿರ್ಲಕ್ಷ್ಯದಿಂದ 800 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೇ ನಿರ್ಲಕ್ಷ್ಯ ತೋರಿರುವ ಘಟನೆ ನಡೆದಿದೆ. ಹೌದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತಿದ್ದಾರೆ.ಈ ಕಾಲೇಜು ಕಲೆ, ಸಾಹಿತ್ಯ,ವಿಜ್ಞಾನ ಮತ್ತು ಕ್ರೀಡೆಯಲ್ಲಿ ತನ್ನದೇ ಆದ ಛಾಫು…

Read More

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಗುರುವಾರ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು.  ಅಂಗಡಿಗಳು, ಶೋರೂಮ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ದೀಪಾವಳಿಯ ಅಮವಾಸ್ಯೆಯ ದಿನವಾದ ಗುರುವಾರ ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು. ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ,…

Read More

ರಿಪ್ಪನ್‌ಪೇಟೆ ಪಟ್ಟಣದ ವಿವಿಧೆಡೆ ಸಂಭ್ರಮದ ಕನ್ನಡ ರಾಜ್ಯೋತ್ಸವ

ರಿಪ್ಪನ್‌ಪೇಟೆ ಪಟ್ಟಣದ ವಿವಿಧೆಡೆ ಸಂಭ್ರಮದ ಕನ್ನಡ ರಾಜ್ಯೋತ್ಸವ ರಿಪ್ಪನ್‌ಪೇಟೆ : ನಾಡಿನಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಕನ್ನಡ ಕಲರವದ ಕಂಪು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ವ್ಯಾಪ್ತಿಯ ಗ್ರಾಮ ಪಂಚಾಯತ್, ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜು , ಸರ್ಕಾರಿ ಕಚೇರಿಗಳಲ್ಲಿ ಮತ್ತು ಕಸ್ತೂರಿ ಕನ್ನಡ ಸಂಘದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಸ್ತೂರಿ ಕನ್ನಡ ಸಂಘದ ವತಿಯಿಂದ ಶಿವಮೊಗ್ಗ ರಸ್ತೆಯ ಗಾಂಧಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಸ್ತೂರಿ…

Read More

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಿ ರಿಪ್ಪನ್‌ಪೇಟೆ : ಬೆಳೆಯುವ ಮಕ್ಕಳಲ್ಲಿ ಕ್ರೀಡಾ ಶಕ್ತಿ ಬೆಳೆಸುವ ಅಗತ್ಯವಿದ್ದು, ಉಲ್ಲಸಿತ ಜೀವನಕ್ಕೆ ಸದೃಢ ಶರೀರಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಇಂದಿನ ಮಕ್ಕಳಲ್ಲಿ ಕ್ರೀಡಾ ಪ್ರವೃತ್ತಿ ಬೆಳೆದು ಬರುವ ಅಗತ್ಯವಿದೆ ಎಂದು ಶಾಸಕ ರಾಜ್ಯ ಅರಣ್ಯ ಅಭಿವೃದ್ದಿ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಪಟ್ಟಣದ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದೊಂದಿಗೆ…

Read More

RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ

RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ ಮಲೆನಾಡಿನ ಪ್ರದೇಶದಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಿಪ್ಪನ್‌ಪೇಟೆ ಪಟ್ಟಣದ ಮೇಲಿನ ಕೆರೆಹಳ್ಳಿ ಹಾಗೂ ಕೆಳಗಿನ ಕೆರೆಹಳ್ಳಿ ಗ್ರಾಮಸ್ತ್ಗರು ತಮ್ಮ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಹಬ್ಬವನ್ನು ಆಚರಿಸಿದರು. ರೈತರು ತಮ್ಮ ಕುಟುಂಬದ ನೇಮ ನಿಷ್ಠೆಯಂತೆ ವರ್ಷವೂ…

Read More

ರಿಪ್ಪನ್‌ಪೇಟೆಯಲ್ಲಿ ‘ಕನ್ನಡ ಜ್ಯೋತಿ ರಥಯಾತ್ರೆ’ಗೆ ಅದ್ದೂರಿ ಸ್ವಾಗತ, ಆತ್ಮೀಯ ಬೀಳ್ಕೊಡುಗೆ

ರಿಪ್ಪನ್‌ಪೇಟೆಯಲ್ಲಿ ‘ಕನ್ನಡ ಜ್ಯೋತಿ ರಥಯಾತ್ರೆ’ಗೆ ಅದ್ದೂರಿ ಸ್ವಾಗತ, ಆತ್ಮೀಯ ಬೀಳ್ಕೊಡುಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪಟ್ಟಣಕ್ಕೆ ಇಂದು “ಕನ್ನಡ ಜ್ಯೋತಿ ರಥಯಾತ್ರೆ” ಆಗಮಿಸಿತು. ಕನ್ನಡ ಸಾಹಿತ್ಯ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದಂತಹ ಪಟ್ಟಣದ ಗ್ರಾಮಸ್ಥರು, ಆತ್ಮೀಯವಾಗಿ ಬೀಳ್ಕೊಡುಗೆ ಕೊಟ್ಟರು. ಪಟ್ಟಣಕ್ಕೆ 87ನೇ ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವಂತ “ಕನ್ನಡ ಜ್ಯೋತಿ ರಥ ಯಾತ್ರೆಗೆ ಆಗಮಿಸಿತು. ಈ ವೇಳೆ ಮಾತನಾಡಿದ ಹೊಸನಗರ ತಾಲೂಕ್ ಕಸಾಪ ಅಧ್ಯಕ್ಷ ತ ಮ ನರಸಿಂಹ ಕನ್ನಡ…

Read More

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸಿ – ಪಿಎಸ್‌ಐ ಪ್ರವೀಣ್ ಎಸ್ ಪಿ

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸಿ – ಪಿಎಸ್‌ಐ ಪ್ರವೀಣ್ ಎಸ್ ಪಿ ರಿಪ್ಪನ್‌ಪೇಟೆ : ಪ್ಲಾಸ್ಟಿಕ್‌ ಬಳಕೆಯಿಂದಾಗಿ ಪರಿಸರ ಸಮತೋಲನ ಕಳೆದುಕೊಂಡು ಅಪಾಯದ ಮಟ್ಟ ತಲುಪಿದೆ. ಶುದ್ಧ ಪರಿಸರದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವಂತೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು. ಕೊಪ್ಪ ಸೈಕ್ಲಿಂಗ್ ಕ್ಲಬ್ ನವರು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನದಡಿಯಲ್ಲಿ ಹಮ್ಮಿಕೊಂಡಿರುವ ಕೊಪ್ಪ – ಸೈಕಲ್ ಜಾಥಾ ರಿಪ್ಪನ್‌ಪೇಟೆ ಪಟ್ಟಣಕ್ಕೆ ಆಗಮಿಸುತಿದ್ದಂತೆ ಅವರನ್ನು ಸ್ವಾಗತಿಸಿ…

Read More

RIPPONPETE | ಮಳೆಯಿಂದ ಸ್ಥಗಿತಗೊಂಡಿದ್ದ ದ್ವಿಪಥ ರಸ್ತೆ ಕಾಮಗಾರಿ ಚಾಲನೆಗೆ ಸೂಚನೆ

RIPPONPETE | ಮಳೆಯಿಂದ ಸ್ಥಗಿತಗೊಂಡಿದ್ದ ದ್ವಿಪಥ ರಸ್ತೆ ಕಾಮಗಾರಿ ಚಾಲನೆಗೆ ಸೂಚನೆ ರಿಪ್ಪನ್‌ಪೇಟೆ : ಮಳೆಯಿಂದ ಸ್ಥಗಿತಗೊಂಡಿದ್ದ ಪಟ್ಟಣದ 5.13 ಕೋಟಿ ರೂ ವೆಚ್ಚದಲ್ಲಿ ಸಾಗರ – ತೀರ್ಥಹಳ್ಳಿ ರಸ್ತೆಯಲ್ಲಿ ದ್ವಿಪಥ ರಸ್ತೆ ಕಾಮಗಾರಿಯನ್ನು ಪುನರಾರಂಭಿಸುವ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ ಮೇರೆಗೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಸಾಗರ ರಸ್ತೆಯ ಎಪಿಎಂಸಿ ಯಿಂದ ತೀರ್ಥಹಳ್ಳಿ ರಸ್ತೆಯ ಹಳೆಯ ಚಿತ್ರಮಂದಿರದವರೆಗೂ ದ್ವಿಪಥ ರಸ್ತೆ ಕಾಮಗಾರಿ ಈಗಾಗಲೇ 70% ಮುಕ್ತಾಯವಾಗಿದ್ದು ಮಳೆಯ ಕಾರಣ ಕಳೆದ ನಾಲ್ಕು…

Read More

ಸರ್ಕಾರಿ ಜಮೀನು ಒತ್ತುವರಿ ತೆರವು

ಸರ್ಕಾರಿ ಜಮೀನು ಒತ್ತುವರಿ ತೆರವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಮಳಲಿಕೊಪ್ಪ ಗ್ರಾಮದ ಸರ್ವೆ ನಂಬರ್ 54 ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 4 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿದರು. ಮಳಲಿಕೊಪ್ಪ ಗ್ರಾಮದ ಎಂ ಬಿ ದೇವಪ್ಪ , ಬೈರಪ್ಪ ಹಾಗೂ ಇನ್ನಿತರರು  ಸರ್ವೆ ನಂ 54 ರಲ್ಲಿ ಸುಮಾರು ನಾಲ್ಕಕ್ಕೂ ಹೆಚ್ಚು ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದರು. ಹುಂಚ ಹೋಬಳಿಯ ರಾಜಸ್ವ ನಿರೀಕ್ಷಕರಾದ ಸೈಯದ್ ಅಪ್ರೋಜ್ ಅಹಮದ್…

Read More
Exit mobile version