Headlines

ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ

ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯ ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ,ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಲಿಂಗಪ್ಪ ಕಗ್ಗಲಿ, ಮೋಹನ್,ಜಯಲಕ್ಷಿ, ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ, ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು.

Read More
Exit mobile version