
ಮಹಾನವಮಿ ಪೂಜೆ, ಉತ್ಸವ | ನವಧಾ ಭಕ್ತಿ ಸಮರ್ಪಣೆಯಿಂದ ನವಚೈತನ್ಯ ; ಹೊಂಬುಜ ಶ್ರೀ
ಮಹಾನವಮಿ ಪೂಜೆ, ಉತ್ಸವ | ನವಧಾ ಭಕ್ತಿ ಸಮರ್ಪಣೆಯಿಂದ ನವಚೈತನ್ಯ ; ಹೊಂಬುಜ ಶ್ರೀ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಕ್ತವೃಂದದವರ ಭಾಗವಹಿಸುವಿಕೆಯಿಂದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಒಂಬತ್ತು ದಿವಸಗಳಲ್ಲಿ ಶರನ್ನವರಾತ್ರಿ ಪೂಜೆ, ಉತ್ಸವಗಳು ನೆರವೇರಿದವು. ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ…


