
ರಿಪ್ಪನ್ ಪೇಟೆ ಸುತ್ತಮುತ್ತ ಭೂಮಿ ಹುಣ್ಣಿಮೆ ಸಂಭ್ರಮ – ಹರತಾಳು ಹಾಲಪ್ಪ ಕುಟುಂಬದಿಂದ ಭೂಮಿ ಪೂಜೆ
ರಿಪ್ಪನ್ ಪೇಟೆ ಸುತ್ತಮುತ್ತ ಭೂಮಿ ಹುಣ್ಣಿಮೆ ಸಂಭ್ರಮ –ಹರತಾಳು ಹಾಲಪ್ಪ ಕುಟುಂಬದಿಂದ ಭೂಮಿ ಪೂಜೆ ರಿಪ್ಪನ್ ಪೇಟೆ : ಪ್ರಕೃತಿಯೊಡನೆ ಮಾನವನ ನಂಟನ್ನು ಪ್ರತಿಬಿಂಬಿಸುವ, ಕೃಷಿಕ ಜೀವನಶೈಲಿಯ ಹೃದಯಸ್ಪರ್ಶಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಭೂಮಿ ಹುಣ್ಣಿಮೆ ರಿಪ್ಪನ್ ಪೇಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಕ್ತಿಭಾವ– ಸಂಭ್ರಮ – ಸಡಗರಗಳಿಂದ ಆಚರಿಸಲಾಯಿತು. ಬೆಳಗಿನ ಜಾವ ಗ್ರಾಮೀಣರು ಹೊಲ–ಗದ್ದೆ, ತೋಟಗಳಲ್ಲಿ ಹೊಸ ತಳಿರು ತೋರಣಗಳಿಂದ ಅಲಂಕರಿಸಿ ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ಮಣ್ಣಿನ ಪರಿಮಳ, ತೆನೆಗಳ ಹೊಳಪು, ಮಳೆಯ ಹನಿಗಳ ಸಮಾಗಮ…


