ಪಾಗಲ್ ಪ್ರೇಮಿಯೊಬ್ಬನ ಕಿರುಕುಳಕ್ಕೆ ಬೇಸತ್ತ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ :
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ವಿದ್ಯಾಶ್ರೀ (21) ಎಂಬ ವಿದ್ಯಾರ್ಥಿನಿ ಪಾಗಲ್ ಪ್ರೇಮಿಯೊಬ್ಬನ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಸವೆ ಗ್ರಾಮದ ವಿದ್ಯಾಶ್ರೀ ಹೊಸನಗರ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಅವಳ ನೆರೆಮನೆಯಾತ ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದನು ಈ ಹಿನ್ನಲೆಯಲ್ಲಿ ಮನನೊಂದ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್…


