POSTMANNEWS

ನೈಜ ಸುದ್ದಿ ನೇರ ಬಿತ್ತರ..

Hosanagara | ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಮೇಲೆ ಹಲ್ಲೆ – ಮೆಗ್ಗಾನ್ ಗೆ ದಾಖಲು

ಬಿಜೆಪಿ ಯುವಮೋರ್ಚಾದ ಅಧ್ಯಕ್ಷನ ಮೇಲೆ ಹಲ್ಲೆ ಮೆಗ್ಗಾನ್ ಗೆ ದಾಖಲು


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ.

ನಡೆದಿದ್ದೇನು ..???

ಬಿಜೆಪಿ ಯುವ ಮೋರ್ಚಾ ತಾಲೂಕು ಅದ್ಯಕ್ಷ ನಿತಿನ್ ಮತ್ತು ನವೀನ್  ಮೇಲೆ ಕೆಲವರು ಕಾರಿನಲ್ಲಿ ಬಂದು ಹಲ್ಲೆ ನಡೆಸಿದ್ದಾರೆ.  ಹೊಸನಗರ ತಾಲೂಕಿನ ನಗರ ಸಮೀಪದ ದೇವಗಂಗೆ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೇರೆ ಕಾರಿನಲ್ಲಿ ಬಂದ ಪ್ರಕಾಶ್ ಅಂಡ್ ಟೀಂ ಏಕಾಏಕಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕರಿಮನೆ ಗ್ರಾ.ಪಂ ಸದಸ್ಯರಾಗಿರುವ ಪ್ರಕಾಶ್ ಮೇಲೆ ಆರೋಪಿಸಲಾಗುತ್ತಿದ್ದು, ಮೂರು ತಿಂಗಳ ಹಿಂದೆ ಗಣಪತಿ ವಿಸರ್ಜನೆ ವೇಳೆ ಬ್ಯಾನರ್ ವಿಚಾರದಲ್ಲಿ ಪ್ರಕಾಶ್ ಮತ್ತು ನಿತಿನ್ ನಡುವೆ ವೈಮನಸ್ಸಾಗಿತ್ತು ಎನ್ನಲಾಗುತ್ತಿದೆ.

ಸಧ್ಯಕ್ಕೆ ಹಲ್ಲೆಗೊಳಗಾದ ನಿತೀನ್ ಮತ್ತು ಸಹೋದರ ನವೀನ್ ಇಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ‌ ಮೇಘರಾಜ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ದೂರು ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version