ರಿಪ್ಪನ್ ಪೇಟೆ : ಜನಪ್ರಿಯ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ರಿಪ್ಪನ್ ಪೇಟೆಯ ಪುನೀತ್ ರಾಜ್ ಅಭಿಮಾನಿ ಬಳಗ ಹಾಗೂ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ನಾಳೆ ಬೆಳಿಗ್ಗೆ 6ರಿಂದ 12 ಗಂಟೆ ತನಕ ರಿಪ್ಪನ್ ಪೇಟೆ ಸಂಪೂರ್ಣವಾಗಿ ಬಂದ್ ಗೆ ಕರೆ ನೀಡಲಾಗಿದೆ.
ರಿಪ್ಪನ್ ಪೇಟೆಯ ವರ್ತಕರು, ಸಾರ್ವಜನಿಕರು ,ಪುನೀತ್ ರಾಜ್ ಅಭಿಮಾನಿ ಬಳಗದವರು, ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಿದ್ದು , ಬೆಳಿಗ್ಗೆ 11:30 ಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಗಲಿದ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.
ಈ ಸ್ವಯಂ ಪ್ರೇರಿತ ಬಂದ್ ನ ಪೂರ್ವಭಾವಿ ಸಭೆಯನ್ನು ಶುಕ್ರವಾರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದಿದ್ದು, ಈ ಸಭೆಯಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಶ್ರೀಮತಿ ಪದ್ಮ ಸುರೇಶ್ ,ಗೌರವ ಅಧ್ಯಕ್ಷ ಹಿರಿಯಣ್ಣ ಬಂಡಾರಿ,ಆರ್ ಎನ್ ಮಂಜುನಾಥ್, ತ ಮ ನರಸಿಂಹ, ಎನ್. ಸತೀಶ್, ಸುರೇಶ್ ಸಿಂಗ್, ಶ್ರೀಧರ್, ಶೀಲಾ , ಮಂಜನಾಯಕ್, ಪಿಯುಸ್ ಡಿಸೋಜ ಸುಧೀಂದ್ರ ಪೂಜಾರಿ, ಹಸನಬ್ಬ ಚಂದ್ರಬಾಬು, ಟಿ. ಆರ್. ಕೃಷ್ಣಪ್ಪ, ಲಕ್ಷ್ಮಿ ಶ್ರೀನಿವಾಸ್ ,ಇನ್ನು ಮುಂತಾದವರು ಹಾಜರಿದ್ದರು.
ವರದಿ:ದೇವರಾಜ್ ಆರಗ