ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ ಕಿಮ್ಮನೆ ಜಿಜ್ಞಾಸೆಯಿಂದ ಹತಾಶೆಯ ಹೇಳಿಕೆ ನೀಡುತಿದ್ದಾರೆ : ಗೃಹ ಸಚಿವ ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ : ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿಯ ಪರ್ವ ನೋಡಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ರವರಿಗೆ ಸಹಿಸಲು ಸಾಧ್ಯವಿಲ್ಲದೇ ಇತಿ-ಮಿತಿ ಮೀರಿ ಆರೋಪಿಸುತ್ತಿದ್ದಾರೆ.ಆರ್.ಎಂ.ಮಂಜುನಾಥ ಗೌಡರಿಂದಾಗಿ ಮುಂದಿನ ಭಾರಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೇಟ್ ಸೀಗುತ್ತದೋ? ಎಂಬ ಜಿಜ್ಞಾಸೆಯಿಂದ ಈ ರೀತಿಯಲ್ಲಿ ಹತಾಶೆಯ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅರೋಪಿಸಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಕೇವಲ ಐದು ವರ್ಷದ ಅವಧಿಯಲ್ಲಿ 1000 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತರಲಾಗಿದೆ.ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭ್ರಷ್ಟಾಚಾರವಾಗಿದೆ…


