ವಿಜ್ರಂಭಣೆಯಿಂದ ಜರುಗಿದ ಶ್ರೀ ಸಿದ್ಧಿವಿನಾಯಕಸ್ವಾಮಿ ಪ್ರತಿಷ್ಠವರ್ಧಂತ್ಯೋತ್ಸವ : ವಿನಯ್ ಗುರೂಜಿಯವರಿಂದ ಆಶೀರ್ವಚನ
ರಿಪ್ಪನ್‌ಪೇಟೆ: ಪಟ್ಟಣದ ಆರಾಧ್ಯ ದೈವ ಶ್ರೀಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ೫ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವವು ವಿಜ್ರಂಭಣೆಯಿಂದ ಜರುಗಿತು. ಶನಿವಾರ ಮುಂಜಾನೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಃ ವಾಚನ, ನಾಂದಿ ಸಮಾರಾಧನೆ, ಮಹಾಸಂಕಲ್ಪ, ಋತ್ವಿಗ್ವರಣ, ಸಮೂಹಿಕ ಷಣ್‌ನಾರಿಕೇಳ ಗಣಹೋಮ, ನವಗ್ರಹ ಹೋಮದೊಂದಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸ್ವಾಮಿಯ ಸನ್ನಿಧಿಯಲ್ಲಿ ಮಂಡಲ ರಚನೆ, ಬ್ರಹ್ಮಕಲಶ ಸ್ಥಾಪನೆ, ಮತ್ತು ಕಲಶಾಧಿವಾಸ ಹೋಮ, ದೇವಿ ಸನ್ನಿಧಿಯಲ್ಲಿ ಪಂಚವಿಂಶತಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ…


