Headlines

ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಸಾಗರದ ಸಿವಿಲ್ ಇಂಜಿನಿಯರ್ ಶವ ಪತ್ತೆ :

ರಾಜಾಕಾಲುವೆಯಲ್ಲಿ ಕೊಚ್ಚಿಹೋದ ಸಾಗರ ಸಮೀಪದ ಅದರಂತೆ ಗ್ರಾಮದ ಯುವಕ ಮಿಥಿನ್(26) ಶವ ಪತ್ತೆಯಾಗಿದೆ.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಯುವಕನ ಶವ ರಾಜಾಕಾಲುವೆಗೆ ಬಿದ್ದ ಸ್ಥಳದಿಂದ 1.5 ಕಿಮೀ ದೂರದಲ್ಲಿ ಪತ್ತೆಯಾಗಿದೆ.


ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸ್ವಗ್ರಾಮವಾದ ಸಾಗರದ ಅದರಂತೆ ಗ್ರಾಮಕ್ಕೆ ಕರೆತರಲಾಗುತ್ತಿದೆ.


ರಾಜಾಕಾಲುವೆಯಲ್ಲಿ ಸಾಗರದ ಯುವಕ ಮಿಥಿನ್ ಕೊಚ್ಚಿಹೋದ ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪ್ರತ್ಯಕ್ಷದರ್ಶಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದು ಶೋಧ ಕಾರ್ಯಾಚರಣೆ ಚುರುಕುಗೊಳಿಸುವಂತೆ ಸೂಚಿಸಿದ್ದರು.ಹಾಗೂ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಘಟನೆಯ ಹಿನ್ನಲೆ :

ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯ ಹಿನ್ನಲೆಯಲ್ಲಿ ಸಾಗರದ ಯುವಕನೊಬ್ಬ ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿತ್ತು.

ಸಾಗರ ಸಮೀಪದ ಅದರಂತೆ ಗ್ರಾಮದ ಸಿವಿಲ್ ಇಂಜಿನಿಯರ್ ಮಿಥಿನ್ (26) ಎಂಬುವರು ರಾಜಾಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ಯುವಕನ‌ ಮನೆಯಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ.

ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಮಿಥಿನ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.ಆ ಮನೆಯ ಕಾಂಪೌಂಡ್ ರಾಜಾಕಾಲುವೆಯ ಮೇಲೆ ಇದ್ದು  ನಿನ್ನೆ ರಾತ್ರಿ 11 ಗಂಟೆಗೆ ಬಾಡಿಗೆ ಮನೆಯ ಕಾಂಪೌಂಡ್ ರಾಜಾಕಾಲುವೆಯಲ್ಲಿ ಹರಿದು ಬಂದ ನೀರಿನ ರಭಸಕ್ಕೆ ಕುಸಿದುಬಿದ್ದಿದೆ.

ಕಾಂಪೌಂಡ್ ಕುಸಿದು ಬಿದ್ದ ಶಬ್ದ ಕೇಳಿ ಹೊರಬಂದ ಮಿಥಿನ್ ಬೈಕ್ ಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನ ಗಮನಿಸಿದ್ದಾನೆ. ರಾಜಾ ಕಾಲುವೆಯ ಅಂಚಿನಲ್ಲಿ ನಿಂತು ಬೈಕ್ ನ್ನು ಹಿಡಿಯಲು ಮುಂದಾದಾಗ ಮಿಥಿನ್ ನಿಂತಿದ್ದ ನೆಲವೇ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.

ಇದರಿಂದ ಮಿಥಿನ್ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇




Leave a Reply

Your email address will not be published. Required fields are marked *

Exit mobile version