ರಿಪ್ಪನ್ ಪೇಟೆ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ – ಸರ್ಕಾರಿ ಶಾಲೆ ಶಿಕ್ಷಕ ಸೇರಿ ಇಬ್ಬರ ಬಂಧನ
ರಿಪ್ಪನ್‌ಪೇಟೆ : ಇತ್ತೀಚಿಗೆ ರಿಪ್ಪನ್ ಪೇಟೆ ಸುತ್ತಮುತ್ತಲಿನ ಮೂರು ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಲಿಂಗದೇವರಕೊಪ್ಪ ಸರ್ಕಾರಿ ಶಾಲೆಯ ಶಿಕ್ಷಕ ವಸಂತ್ ಕುಮಾರ್ ಹಾಗೂ ಗುಡ್ಡದೇವರನಳ್ಳಿ ಗ್ರಾಮದ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೋಕಿ ಜೀವನ ನಡೆಸಲು ಕಳೆದ ಮೂರು ವರ್ಷಗಳಿಂದ ಕಳ್ಳತನ ನಡೆಸುತಿದ್ದ ಇವರು ಒಮ್ಮೆಯು ಸಿಕ್ಕಿಬಿದ್ದಿರಲಿಲ್ಲ. ಆರೋಪಿತರು ಕಳೆದ 3-4 ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು…


