Headlines

ಬಡ ಕುಟುಂಬದ ಮಹಿಳೆಯರ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ|

ಹೆಣ್ಣುಮಕ್ಕಳ ಮೇಲೆ ದರ್ಪ ತೋರಿದ ಅರಣ್ಯಇಲಾಖೆ ಅಧಿಕಾರಿಗಳು


ತೀರ್ಥಹಳ್ಳಿ : ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೈಮರ ಸಮೀಪದ ಸುಣ್ಣದಮನೆ ಎಂಬಲ್ಲಿ ಹೆಣ್ಣುಮಕ್ಕಳ ಮೇಲೆ ಅರಣ್ಯಇಲಾಖೆ ಅಧಿಕಾರಿಗಳು ಹಲ್ಲೆ ನೆಡೆಸಿದ್ದಲ್ಲದೆ ತೀರ ಅಮಾನವೀಯವಾಗಿ ನೆಡೆದುಕೊಂಡಿದ್ದಾರೆ.




ರವಿ ನಾಯಕ್ ಎಂಬುವರು ಅಲ್ಲಿ ಡಿಮ್ಯಾಂಡ್ ದಾಖಲೆಯ ಆಧಾರದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದು ಗ್ರಾಮಪಂಚಾಯಿತಿಯಿಂದ ಡಿಮ್ಯಾಂಡ್ ಕೂಡ ಕೊಟ್ಟಿದ್ದಾರೆ. ಆದರೂ ಇಂದು ಏಕಾಏಕಿ ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನೆಡೆಸಿದ್ದಾರೆ.


ಸುಮಾರು 8 ಜನ ಅರಣ್ಯ ಅಧಿಕಾರಿಗಳು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಲ್ಲಿ ಇದ್ದ ಸಾಮಾನುಗಳನ್ನು ಬೀದಿಗೆ ಎಸೆದು ಮನೆ ಕಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.

ಹೆಣ್ಣು ಮಕ್ಕಳ ಮೇಲೆ ಕೈ ಮಾಡಿರುವ ಅರಣ್ಯ ಅಧಿಕಾರಿಯನ್ನು ಕೂಡಲೇ ಕೆಲಸದಿಂದ ತೆಗೆಯಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.




ಹೊಸಹಳ್ಳಿ ಗ್ರಾಮದ ಕಲ್ಯಾಣಿ ಮತ್ತು ಅವರ ಪುತ್ರಿ ರಂಜೀತಾ ಇವರ ಮೇಲೆ ಅರಣ್ಯಾಧಿಕಾರಿಗಳು ಏಕಾಏಕಿ ಬಂದು ಅವಾಚ್ಯ ಶಬ್ದ ಬಳಸಿ ಧೈಹಿಕ ಹಿಂಸೆ ನೀಡಿ,ದೌರ್ಜನ್ಯ ನಡೆಸಿದ್ದಾರೆ ಎಂದು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.






About The Author

Leave a Reply

Your email address will not be published. Required fields are marked *

Exit mobile version