ರಿಪ್ಪನ್‌ಪೇಟೆಯಲ್ಲಿ ಚಿರತೆ ಪ್ರತ್ಯಕ್ಷ – ದಾಳಿಗೆ ಬಲಿಯಾದ ಹಸು : ಆತಂಕದಲ್ಲಿ ಗ್ರಾಮಸ್ಥರು|leopard
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿ ಜಾನುವಾರು ಬಲಿ ಪಡೆದುಕೊಂಡ ಘಟನೆ ನಡೆದಿದೆ. ರಿಪ್ಪನ್‌ಪೇಟೆ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಮೀಪದ ಮಳವಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಬದಿಯಲ್ಲಿ ತಡರಾತ್ರಿ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ, ಸಾಯಿಸಿ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಎಳೆದು ಸುಮಾರು ನೂರು ಅಡಿಯಷ್ಟು ದೂರದಲ್ಲಿ ಎಳೆದು ಹಾಕಿ ಹೋಗಿರುವಂತಹ ಹೃದಯಾ ವಿದ್ರಾವಕ ಘಟನೆ ನಡೆದಿದೆ. ಮಳವಳ್ಳಿ ಗ್ರಾಮದ ಬಡ ರೈತ ವಿಶ್ವನಾಥ್…


