Headlines

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಅದಿರು ತುಂಬಿದ ಲಾರಿ|accident

ಚಾಲಕನ ನಿಯಂತ್ರಣ ತಪ್ಪಿ ಅದಿರು ತುಂಬಿದ ಲಾರಿಯೊದು ಮರಕ್ಕೆ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಿಡಿಹಳ್ಳ ಸೇತುವೆ ಸಮೀಪದಲ್ಲಿ ನಡೆದಿದೆ. ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆಗೆ ಬರುತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಿಡಿಹಳ್ಳ ಸಮೀಪದಲ್ಲಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ನಿದ್ರೆಯ ಮಂಪರಿನಿಂದ ಅಪಘಾತವಾಗಿರಬಹುದು ಎನ್ನಲಾಗುತ್ತಿದೆ. ಅಪಘಾತದ ರಭಸಕ್ಕೆ ಲಾರಿ ಸಂಪೂ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ನ್ಯಾಮತಿ ಬಳಿ ಕಾರು-ಬೈಕ್ ಭೀಕರ ಡಿಕ್ಕಿ: ರಿಪ್ಪನ್‌ಪೇಟೆ ಮೂಲದ ಯುವಕ ಸಾವು

ನ್ಯಾಮತಿ ಬಳಿ ಕಾರು-ಬೈಕ್ ಭೀಕರ ಡಿಕ್ಕಿ: ರಿಪ್ಪನ್‌ಪೇಟೆ ಮೂಲದ ಯುವಕ ಚಿಕಿತ್ಸೆ ಫಲಿಸದೆ ಸಾವು A youth from Belanduru village near Ripponpet died after succumbing to injuries sustained in a bike and Santro car collision at Savalanga Circle under Nyamathi Police Station limits. ರಿಪ್ಪನ್‌ಪೇಟೆ : ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ಸರ್ಕಲ್‌ನಲ್ಲಿ ಭಾನುವಾರ ಸಂಭವಿಸಿದ್ದ ಕಾರು ಹಾಗೂ ಬೈಕ್ ನಡುವಿನ ಭೀಕರ ರಸ್ತೆ…

Read More

ಕಿಡಿಗೇಡಿಗಳಿಂದ ಗಾಂಧಿ ಪ್ರತಿಮೆ ಧ್ವಂಸ : ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ!!shivamogga news

ಕಿಡಿಗೇಡಿಗಳಿಂದ ಗಾಂಧಿ ಪ್ರತಿಮೆ ಧ್ವಂಸ : ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ! ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ದ್ವಂಸಗೊಳಿಸಿರುವ ದೇಶವಿರೋಧಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್‌ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೆಲದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗೆಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ. ಈ ಕುಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಸದೆ ಬಡಿಯುತ್ತೇವೆ ಎಂದು…

Read More

“ಮಹಾನ್ ಪುರುಷರ ಮಾರ್ಗದಲ್ಲಿ ನಡೆದರೆ ಸುಖ-ಶಾಂತಿ”: ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ಹುಂಚಾ : ಪೂರ್ವಪರಂಪರೆಯಂತೆ ಶೀಕ್ಷೇತ್ರ ಹೊಂಬುಜದಲ್ಲಿ ಜುಲೈ 29ರಂದು ಮೊದಲನೇ ಸಂಪತ್ ಶುಕ್ರವಾರದ ಪೂಜೆಯು ನೆರವೇರಿದವು. ಅಂದು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಾಲಯದಲ್ಲಿ ಧಾರ್ಮಿಕ ವಿಧಿಯಂತೆ ಅಭಿಷೇಕ, ಮಹಾಪೂಜೆ ಬಳಿಕ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ಸನ್ನಿದಿಯಲ್ಲಿ ಸರ್ವಾಲಂಕಾರದೊಂದಿಗೆ ವಿಶೇಷ ಪೂಜಾ ವಿಧಾನಗಳು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ನೇತೃತ್ವ, ಮಾರ್ಗದರ್ಶನದಲ್ಲಿ ಜರುಗಿದವು. ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತವೃಂದದವರು ಶ್ರದ್ಧಾಭಕ್ತಿಯಿಂದ ಜಿನನಾಮ ಸ್ತುತಿಸಿ,…

Read More

Ripponpete | ಮುಸ್ಲಿಂ ಬಾಂಧವರಿಂದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ

Ripponpete | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ  ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್  ಸಖಾಫೀ ಮಾತನಾಡಿ,  ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ  ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ…

Read More

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ

ಶೆಟ್ಟಿಬೀಡು ಬಳಿ ಭೀಕರ ಕಾರು ಅಪಘಾತ: ನಾಲ್ಕು ಪಲ್ಟಿಯಾದ ಕಾರು – ಮೂವರಿಗೆ ಗಂಭೀರ ಗಾಯ, ವೃದ್ದೆಯ ಸ್ಥಿತಿ ಚಿಂತಾಜನಕ Three people were seriously injured after a car overturned multiple times near Shettibidu close to Ripponpet in Hosanagara taluk. An elderly woman remains in critical condition. ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬಾರಿ ಪಲ್ಟಿಯಾದ…

Read More

ಕೊಡಚಾದ್ರಿ ಬೆಟ್ಟವೇರಿದ್ದ ಕೇರಳ ಮೂಲದ ವ್ಯಕ್ತಿ ಹೃದಯಾಘಾತದಿಂದ ಸಾವು|Kodachadri

ಕೊಡಚಾದ್ರಿ ಗಿರಿ ಹತ್ತಿದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ನಿವಾಸಿ ಗೋವಿಂದನ್ ಕುನ್ನಪ್ಪ (72) ಮೃತ ವ್ಯಕ್ತಿ ಶುಕ್ರವಾರದಂದು ಕೇರಳದಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ಗೋವಿಂದನ್ ಕುಟುಂಬ ಕೊಲ್ಲೂರಿನಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ಕೊಡಚಾದ್ರಿ ಗಿರಿಗೆ ಹೋಗಿದ್ದು ಪ್ರವಾಸಿಮಂದಿರದಿಂದ ಗಿರಿ ತುದಿಯ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಸರ್ವಜ್ಞ ಪೀಠ ತಲುಪಿದ ನಂತರ ಅಲ್ಲೇ ಗೋವಿಂದನ್ ಕುನ್ನಪ್ಪ ಕುಸಿದು…

Read More

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ವರ್ಗಾವಣೆ ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಹಾವೇರಿ ಡಿಎಸ್ ಬಿ ಘಟಕದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಮುತ್ತನಗೌಡ ಗೌಡಪ್ಪಗೌಡರ್  ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗುರಣ್ಣ ಹೆಬ್ಬಾಳ್ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಗುರಣ್ಣ ಹೆಬ್ಬಾಳ್ ರವರು ಬೆಂಗಳೂರಿನ‌ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಅಗಸ್ಟ್ 2023 ರಿಂದ ಹೊಸನಗರದ ಸರ್ಕಲ್ ಇನ್ಸ್…

Read More

ತೀರ್ಥಹಳ್ಳಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಆರಗ ಜ್ಞಾನೇಂದ್ರ ಚಾಲನೆ : ಸಾವಿರಾರು ವಿದ್ಯಾರ್ಥಿಗಳು ಬಾಗಿ

ತೀರ್ಥಹಳ್ಳಿ : 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕೆಂಬ ಕಾರಣಕ್ಕಾಗಿ ಪಟ್ಟಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿದರು. ಪಟ್ಟಣದ ಕುಶಾವತಿ ಪಾರ್ಕ್ ನಿಂದ ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದವರೆಗೆ ಸಾವಿರಾರು ವಿದ್ಯಾರ್ಥಿಗಳೊಡನೆ ಸರಿ ಸುಮಾರು 2 ಕಿಮೀ ಗಳಷ್ಟು ದೂರ ಮಳೆಯಲ್ಲಿಯೇ ಹೆಜ್ಜೆ ಹಾಕಿದರು. ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು…

Read More

ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ಗಾಳಿಬೈಲು ಗ್ರಾಮದಲ್ಲಿ ಈದ್ ಮಿಲಾದ್ ಸಂಭ್ರಮ ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ…

Read More
Exit mobile version